ನೀರೆಂದು ಥಿನ್ನರ್ ಕುಡಿದ ಬಾಲಕಿ ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

drink-water

ಕಲಬುರಗಿ, ಜೂ.11-ಮನೆಗೆ ಬಣ್ಣ ಹಚ್ಚಲು ತಂದಿಟ್ಟಿದ್ದ ಥಿನ್ನರ್‍ನ್ನು ಬಾಲಕಿ ನೀರೆಂದುಕೊಂಡು ಕುಡಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಅಂಗನವಾಡಿ ಗ್ರಾಮದ ಸೌಮ್ಯ ರೇವಣಸಿದ್ಧಪ್ಪ ಎಂಬಾಕೆಯೇ ಅಸ್ವಸ್ಥಗೊಂಡಿರುವ ಬಾಲಕಿ. ಇವರ ಮನೆಗೆ ಬಣ್ಣ ಹಚ್ಚುವ ಸಲುವಾಗಿ ಥಿನ್ನರ್‍ನ್ನು ತಂದಿಟ್ಟಿದ್ದರು. ಥಿನ್ನರ್ ಇದ್ದ ಬಾಟಲಿ ವಾಟರ್ ಬಾಟಲಿಯಂತೆ ಕಂಡಿದ್ದರಿಂದ ನೀರೆಂದು ಸೌಮ್ಯ ಕುಡಿದು ಅಸ್ವಸ್ಥರಾಗಿದ್ದಾರೆ.ಕೆಲ ನಿಮಿಷದ ಬಳಿಕ ಪೋಷಕರಿಗೆ ವಿಷಯ ತಿಳಿದು ತಕ್ಷಣ ಸೌಮ್ಯಳನ್ನು ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಸದ್ಯ ಬಾಲಕಿ ಸೌಮ್ಯ ಸ್ಥಿತಿ ಗಂಭೀರವಾಗಿದೆ.

Facebook Comments