ಜಿ.ಟಿ.ದೇವೇಗೌಡರ ಖಾತೆ ಬದಲಾವಣೆಗೆ ಸಿಎಂ ಗ್ರೀನ್ ಸಿಗ್ನಲ್

ಈ ಸುದ್ದಿಯನ್ನು ಶೇರ್ ಮಾಡಿ

H-D-Kumaraswamy-Devegowda

ಮೈಸೂರು, ಜೂ.11-ಸಚಿವ ಜಿ.ಟಿ.ದೇವೇಗೌಡ ಅವರ ಖಾತೆ ಬದಲಾವಣೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡಲಾಗಿತ್ತು. ಆದರೆ ಅವರು ಈ ಖಾತೆಯು ನನಗೆ ಬೇಡ ಎಂದು ಮುನಿಸಿಕೊಂಡಿದ್ದರು. ಹಾಗೆಯೇ ಸಾಮಾಜಿಕ ಜಾಲತಾಣದಲ್ಲೂ ಹಲವು ಮಂದಿ 8ನೇ ತರಗತಿ ಓದಿರುವಂತಹ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆಯನ್ನು ನಿಭಾಯಿಸಲು ಸಾಧ್ಯವೇ. ಅವರಿಗೆ ಈ ಖಾತೆ ಏಕೆ ನೀಡಿದ್ದಾರೆ? ಇದನ್ನು ಅವರಿಗೆ ನೀಡುವ ಮೊದಲು ಯೋಚಿಸಬಾರದಿತ್ತೇ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿದ್ದವು.

ಅದು ಅಲ್ಲದೆ, ಜಿ.ಟಿ.ದೇವೇಗೌಡರ ಬೆಂಬಲಿಗರು ಸಹ ಈ ಬಗ್ಗೆ ದೇವೇಗೌಡರ ಅವರ ಮನೆಗೆ ತೆರಳಿ ಮಗ ಹರ್ಷಗೌಡನನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ನಿಮ್ಮ ತಂದೆಯವರು ಈ ಖಾತೆಯನ್ನು ಒಪ್ಪಿಕೊಳ್ಳಬಾರದು. ನಮಗೆ ಈ ಖಾತೆ ಬೇಡ ಎಂದು ಹೇಳಬೇಕು ಎಂದು ಪ್ರತಿಭಟಿಸಿದ್ದರು.
ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈಸೂರಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಜಿ.ಟಿ.ದೇವೇಗೌಡ ಭೇಟಿ ಮಾಡಿ ಈ ಬಗ್ಗೆ ಮಾತನಾಡಿ, ಖಾತೆ ಬದಲಾವಣೆ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಬೆಂಗಳೂರಿಗೆ ತೆರಳಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ.

Facebook Comments

Sri Raghav

Admin