ಮಹಿಳೆಗೆ ಸಚಿವ ಸ್ಥಾನ ನೀಡಿರುವುದಕ್ಕೆ ಎದ್ದಿರುವ ಅಪಸ್ವರ ಬಗ್ಗೆ ಜಯಮಾಲಾ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Jayamala--01

ಬೆಂಗಳೂರು, ಜೂ.11-ಮಹಿಳೆಗೆ ಸಚಿವ ಸ್ಥಾನ ದೊರೆತಿರುವುದಕ್ಕೆ ಅಪಸ್ವರ ಎದ್ದಿರುವುದು ಸರಿಯಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಜಯಮಾಲಾ ಹೇಳಿದ್ದಾರೆ. ಎಚ್.ಎಂ.ರೇವಣ್ಣ ಮತ್ತು ಎಂಎಲ್‍ಸಿಗಳ ಅಪಸ್ವರ ಸಂಬಂಧ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿದ ಅವರು, ಮಹಿಳೆಗೆ ಸಚಿವ ಸ್ಥಾನ ದೊರೆತಿರುವುದಕ್ಕೆ ವಿರೋಧ ವ್ಯಕ್ತಪಡಿಸಬಾರದು ಎಂದರು. ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನ ಕೇಳುವುದು ಶಾಸಕರ ಹಕ್ಕು. ಅದನ್ನು ಕೇಳಲಿ ಆದರೆ ಅವರ ಬೇಡಿಕೆಗಳನ್ನು ಹೈಕಮಾಂಡ್ ಬಳಿ ಇಡಬೇಕೆಂದು ಜಯಮಾಲಾ ಅವರು ಹೇಳಿದರು.

Facebook Comments

Sri Raghav

Admin