ಮಂಗೋಲಿಯಾ ಅಲೆಮಾರಿಗಳ ಹಿಮಸಾರಂಗ ಪೋಷಣೆಯ ರಹಸ್ಯ ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

ds-1

ಮಂಗೋಲಿಯಾದ ಹಿಮಗಾಡಿನ ಅಲೆಮಾರಿ ಜನಾಂಗದವರ ಬದುಕು ಸವಾಲಿನಿಂದ ಕೂಡಿದೆ. ದುರ್ಗಮ ಪ್ರದೇಶದ ಈ ಮಂದಿಗೆ ಹಿಮಸಾರಂಗ ಪೋಷಣೆಯೇ ಪ್ರಧಾನ ಕಸುಬು. ಪರಿಸರ ಒಡ್ಡಿರುವ ಸವಾಲಿನೊಂದಿಗೆ ಜೀವನ ಸಾಗಿಸುತ್ತಿರುವ ಇವರ ಕಷ್ಟಸಹಿಷ್ಣುತೆಗೆ ಮೆಚ್ಚಲೇಬೇಕು. ಈ ಬುಡಕಟ್ಟು ಜನರ ಕುರಿತು ಇಲ್ಲೊಂದು ಸಂಕ್ಷಿಪ್ತ ವರದಿ.  ರಷ್ಯಾ ಗಡಿಭಾಗದಲ್ಲಿರುವ ಮಂಗೋಲಿಯಾದ ಟೈಗಾದ ಹಿಮಗಾಡು ಅತ್ಯಂತ ದುರ್ಗಮ ಮತ್ತು ನಿರ್ಜನ ಪ್ರದೇಶ. ಇಲ್ಲಿನ ಡುಖಾ ಬುಡಕಟ್ಟು ಸಮುದಾಯದ ಸದಸ್ಯ 55 ವರ್ಷದ ಎರ್‍ಡೆನ್‍ಬಾಟ್ ಚೂಲೂ ಪ್ರತಿದಿನ ತನ್ನ ಸಾರಂಗಗಳನ್ನು ಮೇಯಿಲು ಹಿಮಗಾಡಿಗೆ ಕರೆದೊಯ್ಯುತ್ತಾನೆ. ನಂತರ ಅವುಗಳನ್ನು ತನ್ನ ಕುಗ್ರಾಮಕ್ಕೆ ಸುರಕ್ಷಿತವಾಗಿ ಕರೆತರುವ ಹೊಣೆ ಈತನದು.

ds

ಈ ಪುಟ್ಟ ಸಮುದಾಯ ಸಹಸ್ರಾರು ವರ್ಷಗಳಿಂದ ಪ್ರಾಣಿಗಳ ಸಾಗಣೆಯನ್ನೇ ಮುಖ್ಯ ಕುಲಕಸುಬನ್ನಾಗಿ ಮಾಡಿಕೊಂಡಿದೆ. ಇಲ್ಲಿನ 280 ಡುಖಾ ಗುಡ್ಡಗಾಡು ಸಮುದಾಯದ ಜನರಿಗೆ ಹಿಮಸಾರಂಗಗಳೇ ಜೀವನಾಧಾರ. ಅವು ಆಹಾರ, ಬಟ್ಟೆ, ಸಾರಿಗೆ ಮತ್ತು ಸಾಧನಗಳನ್ನು ಸಾಗಿಸುತ್ತದೆ. ತಲೆತಲಾಂತರಗಳಿಂದಲೂ ಸಾರಂಗ ಪೋಷಣೆ ಮಾಡುತ್ತಾ ಬಂದಿರುವ ಈ ಜನರು ಅದನ್ನು ತಮ್ಮ ಮುಂದಿನ ತಲೆಮಾರು ಕೂಡ ಅನುಸರಿಸುವಂತೆ ಮಾಡಿದ್ದಾರೆ. ಇದು ಅವರಿಗೆ ಒಂದು ರೀತಿಯ ಸಂಪ್ರದಾಯವಾಗಿದೆ. ಈ ಜನಾಂಗವನ್ನು ವಿಶ್ವದ ಅತ್ಯಂತ ಪುಟ್ಟ ಜನಾಂಗೀಯ ಸಮೂಹ ಎಂದು ಪರಿಗಣಿಸಲಾಗಿದೆ.  ಈ ಮುಗ್ಧ ಮತ್ತು ಕಷ್ಟ ಸಹಿಷ್ಣು ಬುಡಕಟ್ಟು ಜನರು ಪ್ರಕೃತಿ ಮತ್ತು ಪೂರ್ವಜರ ಆರಾಧಕರು. ನಿಸರ್ಗ ಮತ್ತು ತಮ್ಮ ಹಿಂದಿನ ತಲೆಮಾರಿನ ಆಶೀರ್ವಾದ ಪಡೆಯಲು ಇವುರು ಶಾಮಾನಿಸಂ ಎಂಬ ಆಚರಣೆ ಅನುಸರಿಸುತ್ತಾರೆ. ಸಾರಂಗ ಮೃಗದ ಚರ್ಮದಿಂದ ತಯಾರಿಸಿದ ಡೋಲನ್ನು ಬಾರಿಸಿ ದುಷ್ಟಶಕ್ತಿಯನ್ನು ಓಡಿಸುವ ನಂಬಿಕೆಯ ಆಚರಣೆ ಇಲ್ಲಿದೆ. 39 ವರ್ಷದ ಕಿಝಿಲ್-ಊಲ್ ಎಂಬಾತ ತನ್ನ ಪೂರ್ವಜನರ ಸಂಪ್ರದಾಯವನ್ನು ಆಚರಿಸುತ್ತೇನೆ ಎನ್ನುತ್ತಾನೆ. ಆಧುನಿಕ ಜಗತ್ತಿನ ಸಂಪರ್ಕದಿಂದ ದೂರು ಉಳಿದಿರುವ ಈ ಜನಾಂಗಕ್ಕೆ ಪ್ರಕೃತಿ ಮತ್ತು ಪ್ರಾಣಿಗಳೇ ಆಧಾರ. ಇಲ್ಲಿನ ಮಕ್ಕಳಿಗಂತೂ ಹಿಮಸಾರಂಗಳೇ ಆಪ್ತ ಗೆಳೆಯರು.

Facebook Comments

Sri Raghav

Admin