ತೈವಾನ್‍ನಲ್ಲಿ ಬಂಡವಾಳ ಹೂಡುವಂತೆ ಕರ್ನಾಟಕದ ಉದ್ಯಮಿಗಳಿಗೆ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

taivan

ಬೆಂಗಳೂರು, ಜೂ.11-ಉದ್ಯಾನನಗರಿಯಲ್ಲಿ ನಡೆದ ತೈವಾನಿನ ಟಾವೊಯುನ್‍ನಲ್ಲಿ ಬಂಡವಾಳ ಅವಕಾಶಗಳ ಕುರಿತ ವಿಚಾರ ಸಂಕಿರಣದಲ್ಲಿ ಉದ್ಯಮಿಗಳಿಗೆ ಹೂಡಿಕೆಗಳ ಹೆಬ್ಬಾಗಿಲನ್ನು ತೆರೆದಿಡಲಾಯಿತು. ತೈವಾನ್ ವ್ಯಾಪಾರ ವಿದೇಶಾಂಗ ಅಭಿವೃದ್ದಿ ಮಂಡಳಿ-ಟೈಟ್ರಾ ಆಯೋಜಿಸಿದ್ದ ಈ ಸಮಾವೇಶವು ಬಂಡವಾಳ ಹೂಡಿಕೆದಾರರು ಹಾಗೂ ಉದ್ಯಮಿಗಳ ಸಂಪರ್ಕ ಸೇತುವೆಯಾಯಿತು.

ವಿಚಾರಸಂಕಿರಣದಲ್ಲಿ ಪ್ರಧಾನ ಭಾಷಣ ಮಾಡಿದ ತೈವಾನ್‍ನ ಚುಂಗ್-ಹುವಾ ಆರ್ಥಿಕ ಸಂಸ್ಥೆ ನಿರ್ದೇಶಕ ಡಾ. ಡ-ನೀನ್ ಲಿಯು, ಟಾವೊಯುನ್‍ನಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಫುಲ ಅವಕಾಶಗಳನ್ನು ವಿವರಿಸಿದರು. ಭಾರತ ಮತ್ತು ತೈವಾನ್ ನಡುವೆ ಅದರಲ್ಲೂ ವಿಶೇಷವಾಗಿ ಟಾವೊಯುನ್ ಜೊತೆ ವಾಣಿಜ್ಯ ಅವಕಾಶಗಳು ಮತ್ತು ಭವಿಷ್ಯದ ಅಭಿವೃದ್ದಿಗಳ ಬಗ್ಗೆ ಪ್ರಸ್ತಾಪಿಸಿದ ಅವರು ಉಭಯ ದೇಶಗಳ ನಡುವಣ ಕೈಗಾರಿಕಾ ಸಂಬಂಧಗಳನ್ನು ತಿಳಿಸಿದರು.

ಟಾವೊಯುನ್‍ನಲ್ಲಿ ಬಂಡವಾಳ ಹೂಡುವಂತೆ ಭಾರತದ ಅದರಲ್ಲೂ ಕರ್ನಾಟಕದ ಉದ್ಯಮಿಗಳಿಗೆ ಮುಕ್ತ ಆಹ್ವಾನ ನೀಡಿದ ಅವರು, 2017ರಲ್ಲಿ ತೈವಾನ್ ಭಾರತದೊಂದಿಗೆ ತೈವಾನ್ 240 ದಶಲಕ್ಷ ಡಾಲರ್‍ಗಳ ವ್ಯಾಪಾರ ವಹಿವಾಟು ನಡೆಸಿದೆ. ಭಾರತವು ತೈವಾನ್ 16ನೇ ಬೃಹತ್ ವ್ಯಾಪಾರ ಪಾಲುದಾರಿಕೆ ರಾಷ್ಟ್ರ ಎಂದು ತಿಳಿಸಿದರು.

ಭಾರತ ಮತ್ತು ತೈವಾನ್ ನಡುವಣ ಆರ್ಥಿಕ ಸಹಕಾರ ಬಲವರ್ಧನೆ, ವ್ಯಾಪಾರ ಸಂಬಂಧ ವೃದ್ಧಿ ಹಾಗೂ ಭಾರತ-ಟಾವೊಯುನ್ ನಡುವೆ ಬಂಡವಾಳ ಹೂಡಿಕೆಗಳ ಹೆಚ್ಚಳ-ಈ ಸಮಾವೇಶದ ಮುಖ್ಯ ಉದ್ದೇಶವಾಗಿತ್ತು. ಬೆಂಗಳೂರಿನ ವಿಶ್ವ ವ್ಯಾಪಾರ ಕೇಂದ್ರದ ಅಧ್ಯಕ್ಷ ಮೆನನ್, ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ,ಎನ್.ವಿದ್ಯಾಶಂಕರ್, ಟಾವೊಯುನ್ ನಗರದ ಆರ್ಥಿಕ ಅಭಿವೃದ್ದಿ ಇಲಾಖೆ ಮುಖ್ಯ ಕಾರ್ಯದರ್ರ್ಶಿ ಕುವೋ ಯು ಹಿಸಿನ್, ಇಂಡೋ-ಅಮೆರಿಕನ್ ಚೆಂಬರ್ಸ್ ಆಫ್ ಕಾಮರ್ಸ್ ಉಪಾಧ್ಯಕ್ಷ ಮೋಹನ್ ರಾಜಾಮಣಿ ಮೊದಲಾದ ಗಣ್ಯರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin