ರಂಜಾನ್ ಆಚರೆಣೆಯಲ್ಲಿದ್ದವರಿಂದ ಮಧ್ಯರಾತ್ರಿ ಬೈಕ್ ವೀಲಿಂಗ್, 30 ಮಂದಿ, 30 ಬೈಕ್ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

bike

ನೆಲಮಂಗಲ, ಜೂ, 12-ಮಧ್ಯರಾತ್ರಿ ಬೆಂಗಳೂರಿನಿಂದ ಬೈಕ್‍ಗಳಲ್ಲಿ ಬಂದ ವ್ಹೀಲಿಂಗ್ ಮಾಡುತ್ತಿದ್ದ 30 ಮಂದಿಯನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿ 30 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮಧ್ಯರಾತ್ರಿ 12.30ರಲ್ಲಿ ಬೆಂಗಳೂರಿನಿಂದ 30 ಮಂದಿಯ ಗುಂಪು ಬೈಕ್‍ಗಳಲ್ಲಿ ಬಂದು ನೆಲಮಂಗಲ ಟೋಲ್ ಹಾಗೂ ಬೆಂಗಳೂರು ಟೋಲ್ ನಡುವೆ ವ್ಹೀಲಿಂಗ್ ನಡೆಸುತ್ತಿದ್ದರು. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿಯಾಗಿದೆ. ತಕ್ಷಣ ಸ್ಥಳೀಯರೆಲ್ಲ ಸೇರಿ ಪಟ್ಟಣ ಠಾಣೆಗೆ ವಿಷಯ ತಿಳಿಸಿದ್ದಾರೆ.

bike-whillers-arest-1

ವೃತ್ತ ನಿರೀಕ್ಷಕ ಶಿವಣ್ಣ ಅವರು ಮಾಹಿತಿ ಆಧರಿಸಿ ನೆಲಮಂಗಲ ಪಟ್ಟಣ ಪಿಎಸ್‍ಐ ಮಂಜುನಾಥ್, ಗ್ರಾಮಾಂತರ ಪಿಎಸ್‍ಐ ಬಾಳೇಗೌಡ ನೇತೃತ್ವದಲ್ಲಿ ಇಂದು ಮುಂಜಾನೆ 2 ಗಂಟೆ ಸಮಯದಲ್ಲಿ ದಾಳಿ ಮಾಡಿ 30 ಬೈಕ್ ಹಾಗೂ 30 ಮಂದಿಯನ್ನು ಬಂಧಿಸಿದ್ದಾರೆ. ನಿನ್ನೆ ರಂಜಾನ್ ಪ್ರಯುಕ್ತ ಉಪವಾಸ ಜಾಗರಣೆ ಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಇವರೆಲ್ಲರೂ ಬೈಕ್ ವ್ಹೀಲಿಂಗ್ ಮಾಡಲು ಬಂದಿದ್ದರೆಂಬುದು ವಿಚಾರಣೆಯಿಂದ ತಿಳಿದುಬಂದಿದೆ.

Facebook Comments