ಜಮೀನಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಕರಡಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

bear-attacked-on-lady
ದಾವಣಗೆರೆ,ಜೂ.13-ಜಮೀನಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.  ಉಚ್ಚಂಗಿಪುರದ ನಿವಾಸಿ ಶಾಂತಮ್ಮ (35) ಎಂಬುವರು ಇಂದು ಬೆಳಗ್ಗೆ ಜಮೀನಿಗೆ ತೆರುಳುತ್ತಿದ್ದಾಗ ಪೊದೆಯಲ್ಲಿ ಅಡಗಿ ಕುಳಿತಿದ್ದ ಕರಡಿಯು ಏಕಾಏಕಿ ದಾಳಿ ನಡೆಸಿದೆ. ಶಾಂತಮ್ಮನ ಕಿರುಚಾಟದಿಂದ ಅಕ್ಕಪಕ್ಕದಲ್ಲಿದ್ದ ಗ್ರಾಮಸ್ಥರು ಓಡಿ ಬಂದು ಕರಡಿಯನ್ನು ಓಡಿಸಿದ್ದಾರೆ. ಕರಡಿ ದಾಳಿಯಿಂದಾಗಿ ಆಕೆಯ ಮೈ-ಕೈ -ಕಾಲುಗಳಿಗೆ ಗಾಯಗಳಾಗಿದ್ದು , ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin