ನಟಿ ದೀಪಿಕಾ ಪಡುಕೋಣೆ ವಾಸವಿದ್ದ ಅಪಾರ್ಟಮೆಂಟ್‌ನಲ್ಲಿ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

Deepika--01

ಮುಂಬೈ. ಜೂ.13 : ಮುಂಬೈನ ಪ್ರಭಾದೇವಿ ನಗರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಾಸವಿರುವ ಅಪಾರ್ಟಮೆಂಟ್‌ನಲ್ಲಿ ಬೆಂಕಿ ಅವಘಢ ಸಂಭವಿಸಿದೆ. ಇಲ್ಲಿನ ವರ್ಲಿಯ 33 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಿವುಮಾಂಡೆ ಕಟ್ಟಡದ ಬಿ ವಿಭಾಗದ ಕೊನೆಯ ಎರಡು ಅಂತಸ್ತಿಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಮುಗಿಲೆತ್ತರಕ್ಕೆ ಆವರಿಸಿಕೊಂಡಿದೆ. ಇದೇ ಕಟ್ಟಡದ 26ನೇ ಅಂತಸ್ತಿನಲ್ಲಿ ದೀಪಿಕಾ ಪಡುಕೋಣೆ ವಾಸಿಸುತ್ತಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಇರಲಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಅವರ ಆಪ್ತರು ತಿಳಿಸಿದ್ದಾರೆ.

ಮಧ್ಯಾಹ್ನ 2-08 ರ ಸುಮಾರಿನಲ್ಲಿ ಈ ಅಗ್ನಿ ಅವಘಡ ಉಂಟಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 90 ಮಂದಿಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ. ಬೆಂಕಿ ನಂದಿಸಲು 10 ಅಗ್ನಿಶಾಮಕ ವಾಹನ, ಎರಡು ಟ್ರಕ್ , ಐದು ನೀರಿನ ಟ್ಯಾಂಕರ್ ಗಳನ್ನು ಬಳಸಿಕೊಳ್ಳಲಾಗಿತ್ತು, ಕೆಲ ತಾಸುಗಳ ಕಾರ್ಯಾಚರಣೆ ನಂತರ ಬೆಂಕಿ ಹತೋಟಿಗೆ ಬಂದಿದೆ. ಇದುವರೆಗೂ ಯಾವುದೇ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ

Facebook Comments

Sri Raghav

Admin