ಬೆಸ್ಕಾಂ ಸಿಬ್ಬಂದಿ ಟೀ ಕುಡಿಯಲು ಹೋದಾಗ ಕ್ಯಾಶ್‍ ಕೌಂಟರ್’ನಲ್ಲಿಟ್ಟಿದ್ದ 15 ಲಕ್ಷ ರೂ. ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Cash-Kounter

ಬೆಂಗಳೂರು, ಜೂ.13- ಆನೇಪಾಳ್ಯದ ಬೆಸ್ಕಾಂ ಕಚೇರಿಯ ಕ್ಯಾಶ್‍ ಕೌಂಟರ್‍ನಲ್ಲಿಟ್ಟಿದ್ದ 15 ಲಕ್ಷ ರೂ. ಹಣವನ್ನು ಅಪಹರಿಸಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಖಾಸಗಿ ಕಂಪೆನಿ ನೌಕರ ವಿವಿಧೆಡೆಯಿಂದ ಸಂಗ್ರಹಿಸಿಕೊಂಡು ತಂದಿದ್ದ 15 ಲಕ್ಷ ರೂ.ಗಳನ್ನು ಬೆಸ್ಕಾಂ ಕಚೇರಿಯ ಕ್ಯಾಶ್‍ಕೌಂಟರ್‍ನಲ್ಲಿಟ್ಟು ನೌಕರರ ಜತೆ ಟಿ ಕುಡಿಯಲು ಹೊರ ಹೊಗಿದ್ದರು. ಟಿ ಕುಡಿದು ಬರುವ 20 ನಿಮಿಷದ ಅವಧಿಯಲ್ಲಿ ಯಾರೋ ಕ್ಯಾಶ್‍ಕೌಂಟರ್‍ನಲ್ಲಿಟ್ಟಿದ್ದ 15 ಲಕ್ಷ ರೂ. ಇದ್ದ ಬ್ಯಾಗನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸ್ಪೂರ್ತಿ ಎಂಬುವರು ಆಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin