ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಇಸ್ರೇಲ್ ಮಾದರಿ ಕೃಷಿ ಅನುಷ್ಠಾನ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

WhatsApp Image 2018-06-13 at 1.26.46 PM
ಬೆಂಗಳೂರು, ಜೂ.13- ಉತ್ತರ ಮತ್ತು ದಕ್ಷಿಣ ಕರ್ನಾಟಕದ ಎರಡೂ ಭಾಗಗಳಲ್ಲೂ ಇಸ್ರೇಲ್ ಮಾದರಿ ಕೃಷಿ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಆದಿಚುಂಚನಗಿರಿಯಲ್ಲಿ ಕಾಲ ಭೈರವೇಶ್ವರ ಸ್ವಾಮಿಗೆ ಅಮಾವಸ್ಯೆನಿಮಿತ್ತ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಪಲಾಯನ ಮಾಡು ವುದಿಲ್ಲ. ಸಾಲ ಮನ್ನಾ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗವುದು ಎಂದರು.

ನಮ್ಮ ಸಂಸ್ಕøತಿಯಲ್ಲಿ ಕಾಣದ ಶಕ್ತಿಯಿದೆ. ಮುಖ್ಯಮಂತ್ರಿ ಹುದ್ದೆ ಜವಾಬ್ದಾರಿ ನಿಬಾಯಿಸಲು ಪ್ರಕೃತಿಯ ಕೃಪೆ ಬೇಕಾಗಿದ್ದು, ದೇವರ ದಯೆಯಿಂದ ನಾನು ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೂ ಉತ್ತಮ ಮಳೆಯಾಗಿದೆ. ಕೆಲವೆಡೆ ಅನಾವೃಷ್ಠಿ ಯಾಗಿ ನಷ್ಟ ಉಂಟಾಗಿ ರುವ ವರದಿಯಾಗಿದೆ. ಈ ಬಾರಿ ಜಲಾಶಯಗಳು ತುಂಬುವ ವಿಶ್ವಾಸವಿದ್ದು, ಮಂಡ್ಯ ಜಿಲ್ಲೆಯ ರೈತರು ಭತ್ತ ನಾಟಿ ಮಾಡುವ ಕಾಲವೂ ಬರಲಿದೆ.

ಆದಿಚುಂಚನಗಿರಿಯಲ್ಲಿ ಕಾಲಭೈರವೇಶ್ವರಸ್ವಾಮಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಪೂಜೆ ಸಲ್ಲಿಸುವ ರೀತಿ ಬೇರೆ ಕ್ಷೇತ್ರಗಳಲ್ಲಿ ಕಾಣಲು ಸಾಧ್ಯವಿಲ್ಲ. ದೇವರ ಮೇಲಿನ ನಂಬಿಕೆಯಿಂದ ಈ ಹಿಂದೆ ಬಂದಂತೆ ಈಗಲೂ ಪೂಜೆ ಸಲ್ಲಿಸಲು ಆಗಮಿಸಿರುವುದಾಗಿ ತಿಳಿಸಿದರು. ಜಯನಗರ ವಿಧಾನಸಭಾ ಕ್ಷೇತ್ರ ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಚುನಾಯಿತರಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Facebook Comments

Sri Raghav

Admin