ಕಾಲಬೈರವೇಶ್ವರನಿಗೆ ಸಿಎಂ ಕುಮಾರಸ್ವಾಮಿ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

CM-Pooje

ಬೆಂಗಳೂರು, ಜೂ.13- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದಿಚುಂಚನಗಿರಿ ಮಠದ ಶ್ರೀ ಕಾಲಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಅಮಾವಾಸ್ಯೆಯ ವಿಶೇಷ ಪೂಜೆಯನ್ನು ಕುಮಾರಸ್ವಾಮಿ ನೆರವೇರಿಸಿದರು.  ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವು ಗಣ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದವನ್ನು ಕುಮಾರಸ್ವಾಮಿ ಪಡೆದರು.

WhatsApp Image 2018-06-13 at 12.18.01 PM

ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಶ್ರೀಮಠಕ್ಕೆ ಭೇಟಿ ನೀಡಿ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಚುನಾವಣಾ ಪೂರ್ವದಲ್ಲಿ ಕುಮಾರಸ್ವಾಮಿ ಅವರು ಕುಟುಂಬ ಸದಸ್ಯರೊಂದಿಗೆ ಶ್ರೀಮಠದಲ್ಲಿ ಅಮಾವಾಸ್ಯೆಯ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಖ್ಯಮಂತ್ರಿಯಾದ ನಂತರವೂ ಅಮಾವಾಸ್ಯೆ ಪೂಜೆ ಮುಂದುವರೆಸಿದ್ದು, ಕಾಲಭೈರವೇಶ್ವರ ದೇವಾಲಯದಲ್ಲಿ ಸಲ್ಲಿಸಿರುತ್ತಿರುವ 9ನೇ ಬಾರಿಯ ಅಮಾವಾಸ್ಯೆ ಪೂಜೆಯಾಗಿತ್ತು.

WhatsApp Image 2018-06-13 at 12.17.57 PM

WhatsApp Image 2018-06-13 at 12.17.51 PM

WhatsApp Image 2018-06-13 at 1.26.46 PM

Facebook Comments

Sri Raghav

Admin