ಯೋಗ್ಯತೆ ಮತ್ತು ಶಕ್ತ್ಯಾನುಸಾರ ಖಾತೆಗಳನ್ನು ಹಂಚಲಾಗಿದೆ : ಸಚಿವ ಡಿ.ಸಿ.ತಮ್ಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

D-C-Tammanna--01

ಬೆಂಗಳೂರು, ಜೂ.13- ಯೋಗ್ಯತೆ ಮತ್ತು ಶಕ್ತ್ಯಾನುಸಾರ ಖಾತೆಗಳನ್ನು ಹಂಚಲಾಗಿದೆಯೇ ಹೊರತು ಕುಟುಂಬ ಎಂಬ ಕಾರಣಕ್ಕಾಗಿ ನನಗೆ ಸಾರಿಗೆ ಇಲಾಖೆ ಜವಾಬ್ದಾರಿ ಕೊಟ್ಟಿರುವುದಲ್ಲ ಎಂದು ನೂತನ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳನ್ನು ದೇವೇಗೌಡರ ಮನೆಗೆ ಮದುವೆ ಮಾಡಿಕೊಟ್ಟಿರಬಹುದು. ಆದರೆ, ನನ್ನ ಕುಟುಂಬ ಹಾಗೂ ಅವರ ಕುಟುಂಬ ಬೇರೆ. ಸಾರ್ವಜನಿಕ ಜೀವನದಲ್ಲಿ ಈ ರೀತಿಯ ಸಂಬಂಧಗಳನ್ನು ತಳುಕು ಹಾಕುವುದು ಒಳ್ಳೆಯದಲ್ಲ. ಶಕ್ತಿ ಮತ್ತು ಯೋಗ್ಯತೆಯನ್ನು ಆಧರಿಸಿ ಜವಾಬ್ದಾರಿ ಕೊಡಬೇಕು. ನನಗೆ ಯೋಗ್ಯತೆ ಇದೆ ಎಂಬ ಕಾರಣಕ್ಕಾಗಿಯೇ ಸಾರಿಗೆ ಇಲಾಖೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಟೀಕೆಗಳಿಗೆ ಉತ್ತರಿಸಿದರು.

ಜಿ.ಟಿ.ದೇವೇಗೌಡರಿಗೆ ಸಾರಿಗೆ ಇಲಾಖೆ ಕೊಡದೇ ಇರುವುದಕ್ಕೆ ನನಗೆ ಕಾರಣ ಗೊತ್ತಿಲ್ಲ. ನನಗೆ ಜವಾಬ್ದಾರಿ ಕೊಟ್ಟಿದ್ದಾರೆ, ನಾನು ಕೆಲಸ ಮಾಡುತ್ತಿದ್ದೇನೆ. ಜೆಡಿಎಸ್‍ನಲ್ಲಿ ಯಾವುದೇ ಒಡಕಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಪಕ್ಷದ ಎಲ್ಲಾ 38 ಶಾಸಕರೂ ಒಟ್ಟಾಗಿದ್ದೇವೆ ಎಂದರು.

Facebook Comments

Sri Raghav

Admin