ವಿಶ್ವಕಪ್ ಫುಟ್ಬಾಲ್‍ಗೆ ಕ್ಷಣಗಣನೆ, ಎಲ್ಲೆಲ್ಲೂ ಕಾಲ್ಚೆಂಡಿನ ಕ್ರೇಜ್

ಈ ಸುದ್ದಿಯನ್ನು ಶೇರ್ ಮಾಡಿ

World-Cup

ಮಾಸ್ಕೋ, ಜೂ.13- ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಒಂದು ತಿಂಗಳ ಕಾಲ ನಡೆಯುವ ಕಾಲ್ಚೆಂಡಿನ ಮಹಾಸಮರ ವಿಶ್ವಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಲಗ್ನಿಕಿ ಕ್ರೀಡಾಂಗಣದಲ್ಲಿ ನಾಳೆ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳುವ ಮೂಲಕ ಜೂ.15ರ ವರೆಗೆ ಮಹಾಸಮರದ ರೋಚಕ ಹಣಾಹಣಿ ನಡೆಯಲಿದೆ.

30 ದಿನಗಳ ಪಂದ್ಯಾವಳಿಗಾಗಿ ಮಾಸ್ಕೋ, ಸೆಂಟ್‍ಪೀಟರ್ಸ್ ಬರ್ಗ್, ಸೋಚಿ ಸೇರಿದಂತೆ ವಿವಿಧ ನಗರಗಳಲ್ಲಿ 12 ಕ್ರೀಡಾಂಗಣಗಳು ನಿರ್ಮಾಣವಾಗಿದ್ದು, ಒಟ್ಟು 64 ಪಂದ್ಯಗಳು ನಡೆಯಲಿವೆ.  2018ರ ಫೀಫಾ ಫುಟ್ಬಾಲ್ ವಿಶ್ವಕಪ್‍ನಲ್ಲಿ ಒಟ್ಟು 32 ತಂಡಗಳು ಸೆಳೆಸಲಿವೆ. ಅರ್ಜೆಂಟೈನಾ, ಬ್ರೆಜಿಲ್, ಜರ್ಮನಿ, ಸ್ಪೇನ್, ಪೋರ್ಚುಗಲ್, ಫ್ರಾನ್ಸ್ ಮತ್ತು ಇಂಗ್ಲೆಂಡ್ ತಂಡಗಳು ಈ ಬಾರಿ ಅತ್ಯಂತ ಪ್ರಬಲ ತಂಡಗಳೆಂದು ಪರಿಗಣಿಸಲಾಗಿದೆ.

ಈ ಬಾರಿ ವಿಶ್ವಕಪ್ ಫುಟ್ಬಾಲ್ ಮಹಾಸಮರದಲ್ಲಿ ಅಪ್ರತಿಮ ಆಟಗಾರರಾದ ಲಿಯೋನೆಲ್ ಮೆಸಿ, ನೈಮರ್, ಟೋನಿಕ್ರೂಜ್, ಇಸ್ಕೋ, ಕ್ರಿಸ್ಟಿಯಾನೊ ರೊನಾಲ್ಡಿನೋ, ಗೇಬ್ರಿಯಲ್, ಜೀಸಸ್ ಪಂದ್ಯಗಳು ಹ್ಯಾರಿಕ್ಯಾನ್ ಮತ್ತು ಥಾಮಸ್ ಮುಲ್ಲರ್ ಗೋಲು ಬಾರಿಸುವ ನೆಚ್ಚಿನ ಆಟಗಾರರೆನಿಸಿದ್ದಾರೆ.
ಫುಟ್ಬಾಲ್ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳುತ್ತಿರುವ 30 ರಾಷ್ಟ್ರಗಳಲ್ಲಿ ಐಸ್‍ಲ್ಯಾಂಡ್ ಅತ್ಯಂತ ಸಣ್ಣ ದೇಶ ಎನಿಸಿದೆ. ಈಜಿಪ್ಟ್‍ನ 45 ವರ್ಷದ ಎಸಾಂಹಲ್ ಹವರಿ (45) ಅತ್ಯಂತ ಹಿರಿಯ ಆಟಗಾರ ಎನಿಸಿದ್ದಾರೆ. ಕ್ರೊವೇಷಿಯಾದ ಲೌರ್ರೇ ಕಾಲಿನಿಕ್ ಅತಿ ಎತ್ತರ (6.6 ಅಡಿ) ದ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಹಲವು ಕೌತುಕ ಸಂಗತಿಗಳನ್ನು ಒಳಗೊಂಡ ಈ ಬಾರಿಯ ಫುಟ್ಬಾಲ್ ಪಂದ್ಯಕ್ಕಾಗಿ ರಷ್ಯಾದಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. 12 ಸುಸಜ್ಜಿತ ಕ್ರೀಡಾಂಗಣಗಳ ನಿರ್ಮಾಣಕ್ಕಾಗಿ ರಷ್ಯಾ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯಿಸಿದೆ. ದೇಶ-ವಿದೇಶಗಳ ಲಕ್ಷಾಂತರ ಫುಟ್ಬಾಲ್ ಅಭಿಮಾನಿಗಳು ಈಗಾಗಲೇ ರಷ್ಯಾದಲ್ಲಿ ಜಮಾಯಿಸಿದ್ದಾರೆ. ಒಟ್ಟಾರೆ ನಾಳೆಯಿಂದ ಫುಟ್ಬಾಲ್ ಪ್ರೇಮಿಗಳಿಗೆ ಕ್ರೀಡಾ ರಸದೌತಣ.  ವ್ಯಾಪಕ ಬಂದೋಬಸ್ತ್: ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರ ದಾಳಿಯ ಆತಂಕದ ಹಿನ್ನೆಲೆಯಲ್ಲಿ ರಷ್ಯಾದ್ಯಂತ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಕ್ರೀಡಾಂಗಣಗಳ ಸುತ್ತಮುತ್ತ ಕಮ್ಯಾಂಡೋಗಳನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ.

Facebook Comments

Sri Raghav

Admin