ಜೂ.17ರಂದು 51ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

anjyaneya-swamy
ಕೆ.ಆರ್.ಪೇಟೆ, ಜೂ.13- ಪಟ್ಟಣದ ಕೆರೆ ಬೀದಿಯ ಬ್ರಾಹ್ಮಣರ ರಾಮಮಂದಿರ ಮುಂಭಾಗದಲ್ಲಿ ಶ್ರೀ ಕಾರ್ಯಸಿದ್ದ ಆಂಜನೇಯಸ್ವಾಮ ದೇವಸ್ಥಾಜ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ 51ಅಡಿ ಎತ್ತರದ ಶ್ರೀ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆ ಕಾರ್ಯಕ್ರಮವು ಇದೇ 15, 16, 17ರಂದು ನಡೆಯಲಿದೆ.  ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಸ್ವಾಗತ ಕಮಾನುಗಳು, ಕೇಸರಿ ಧ್ವಜಗಳಿಂದ ಅಲಂಕರಿಸಿ ಶೃಂಗಾರಗೊಳಿಸಲಾಗಿದ್ದು ಧಾರ್ಮಿಕ ಕಾರ್ಯಕ್ರಮ ನಡೆಸಲು ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ನೂರಾರು ವರ್ಷಗಳ ಇತಿಹಾಸ ಇರುವ ಮೂಡಲ ಶ್ರೀಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸ್ಥಳೀಯ ಯುವಕರು ಮತ್ತು ಭಕ್ತಾಧಿಗಳು ಒಗ್ಗೂಡಿ ಶ್ರೀ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ಮೂಲಕ ಸುಮಾರು ಎರಡು ವರ್ಷಗಳ ಕಾಲ ನಡೆಸಿದ ಪರಿಶ್ರಮದ ಫಲವಾಗಿ ಈಗ 51ಅಡಿ ಎತ್ತರದ ಬೃಹತ್ ಆಂಜನೇಯಮೂರ್ತಿಯು ಲೋಕಾರ್ಪಣೆಗೆ ಸಿದ್ಧವಾಗಿದೆ.

ಮೂರುದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಸಹ ಆಯೋಜನೆ ಮಾಡಿಲಾಗಿದ್ದು, ಕೊನೆಯ ದಿನದಂದು ಮಹಾ ಮಂಗಳಾರತಿ ಆದ ನಂತರ ಎಲ್ಲರಿಗೂ ಮಹಾ ಮಸ್ತಕಾಭಿಷೇಕ ಮಾಡಿಲು ಅವಕಾಶ ಕಲ್ಪಿಸಲಾಗಿದೆ. ಅಭಿಷೇಕ ಮಾಡಲು ವಿಶೇಷ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದ್ದು ಎಲ್ಲರೂ ಸ್ವಾಮಿಗೆ ಅಭಿಷೇಕ ಮಾಡಬಹುದಾಗಿದೆ ಎಂದು ಟ್ರಸ್ಟ್‍ನ ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.  ಜೂ.1ರಂದು ಸಂಜೆ 4 ಗಂಟೆಗೆ ಗಣಪತಿ ಪ್ರಾರ್ಥನೆಯೊಂದಿಗೆ ದೇವೀರಮಣ್ಣಿ ಕೆರೆಗೆ ಹೋಗಿ ಅಲ್ಲಿ ಗಂಗಾ ಪೂಜೆಮಾಡಿದ ನಂತರ ಗೋ ಪೂಜೆ ನಡೆಸಿ ಪೂರ್ಣ ಕೂಂಭದೊಂದಿಗೆ ಪಟ್ಟಣದ ವಿವಿಧ ಭಾಗಗಳಲ್ಲಿ ಉತ್ಸವಗಳು ನಡೆಯಲಿವೆ.  ಜೂ.17ರಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಆಂಜನೇಯ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ, ಕಲಾದೇವತಾ ಹೋಮ, ಪ್ರಾಣ ಪ್ರತಿಷ್ಠಾಪನಾ ಪ್ರಧಾನ ಹೋಮ, ನಿರೀಕ್ಷಣೆ, ಕುಂಭಾಭಿಷೇಕದ ನಂತರ ಮಹಾ ಮಂಗಳಾರತಿ ನೇರವೇರಿಸಿ ಸುಮಾರು ಹತ್ತು ಸಾವಿರ ಭಕ್ತರಿಗೆ ಪ್ರಸಾದ ವಿತರಣೆ ಇರುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Facebook Comments

Sri Raghav

Admin