ಆಫ್ಘಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Afganistan

ಬೆಂಗಳೂರು, ಜೂ. 13- ಕ್ರಿಕೆಟ್ ರಂಗದಲ್ಲಿ ಅಚ್ಚರಿ ಫಲಿತಾಂಶವನ್ನು ನೀಡಿ ಇಡೀ ವಿಶ್ವವನ್ನೇ ನಿಬ್ಬೆರಗು ಗೊಳಿಸುತ್ತಿರುವ ಆಫ್ಘಾನಿಸ್ತಾನ ತಂಡವು ನಾಳೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕಮೇವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಆಫ್ಘಾನಿಸ್ತಾನ ಹಾಗೂ ಭಾರತ ತಂಡ ನಡುವೆ ನಡೆಯುತ್ತಿರುವ ಮೊಟ್ಟಮೊದಲ ಟೆಸ್ಟ್ ಪಂದ್ಯವಾಗಿರುವುದರಿಂದ ಸಹಜವಾಗಿಯೇ ಕುತೂಹಲ ಕೆರಳಿದೆ. ಐಪಿಎಲ್‍ನಲ್ಲಿ ಭಾಗವಹಿಸಿದ್ದ ರಶೀದ್‍ಖಾನ್ , ಮೊಹಮ್ಮದ್ ನಬಿ ಸೇರಿದಂತೆ ಕೆಲವು ಆಟಗಾರರು ಇಲ್ಲಿನ ಕ್ರಿಕೆಟ್ ಪ್ರೇಮಿಗಳಿಗೂ ಪರಿಚಯವಾಗಿರುವುದರಿಂದ ಅವರ ನಾಳಿನ ಟೆಸ್ಟ್ ಪಂದ್ಯ ದಲ್ಲಿ ಇವರತ್ತಲೇ ಹೆಚ್ಚು ದೃಷ್ಟಿ ನೆಟ್ಟಿದೆ.

ಕನ್ನಡಿಗರ ಮಿಂಚು:
ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ತಂಡದಲ್ಲಿ ಐಪಿಎಲ್‍ನಲ್ಲಿ ರನ್ ಹೊರೆ ಹರಿಸಿರುವ ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಕರುಣ್‍ನಾಯರ್ ಅವರು ಕೂಡ ಸ್ಥಾನಪಡೆದಿದ್ದು ಆಡುವ 11ರ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿದರೆ ಪಂದ್ಯಕ್ಕೆ ರೋಚಕತೆ ಸಿಗುತ್ತದೆ.

ದಿನೇಶ್‍ಗೆ ಛಾನ್ಸ್:
ಐಪಿಎಲ್11ರಲ್ಲಿ ಕೋಲ್ಕತ್ತಾ ನೈಟ್‍ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ದಿನೇಶ್‍ಕಾರ್ತಿಕ್ 8 ವರ್ಷಗಳ ನಂತರ ಟೆಸ್ಟ್ ಪಂದ್ಯವನ್ನು ಆಡುತ್ತಿರುವುದು ಕೂಡ ಪಂದ್ಯದ ಮತ್ತೊಂದು ಹೈಲೈಟ್ ಆಗಿದೆ. ವೃದ್ಧಿಮಾನ್ ಶಾ ರ ಅನುಪಸ್ಥಿತಿಯಲ್ಲಿ ಕಾರ್ತಿಕ್ ಅಂಗಳಕ್ಕಿಳಿಯುವ ಅವಕಾಶ ಪಡೆದಿದ್ದು ಟೆಸ್ಟ್ ಪಂದ್ಯಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಆಫ್ಘಾನ್ ವಿರುದ್ಧ ಅವರು ಉತ್ತಮ ಪ್ರದರ್ಶನ ನೀಡಲೇ ಬೇಕು.

ಮೋಡಿ ಮಾಡುವುದೇ ಅಶ್ವಿನ್, ಜಾಡೇಜಾ ಜೋಡಿ:
ಭಾರತ ತಂಡದಲ್ಲಿ ಅತ್ಯುತ್ತಮ ಸ್ಪಿನ್ ಜೋಡಿ ಯೆಂದೇ ಬಿಂಬಿಸಿಕೊಂಡಿದ್ದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರಾಜಾಡೇಜಾ ಅವರು ಕೂಡ ತಂಡದಲ್ಲಿದ್ದು ಆಗರ್ ಸ್ಟೆನಿಕಾಜಯ್ ನೇತೃತ್ವದ ಆಫ್ಘಾನ್ ತಂಡದ ಬ್ಯಾಟ್ಸ್ ಮನ್ ಗಳ ಮೇಲೆ ಮೋಡಿ ಮಾಡುವರೇ ಎಂಬುದನ್ನು ನೋಡಬೇಕು.

Facebook Comments

Sri Raghav

Admin