ಜಯನಗರದಲ್ಲಿ ಜಯದ ನಗೆ ಬೀರಿದ ಸೌಮ್ಯ ರೆಡ್ಡಿ, ಬೆಂಬಲಿಗರ ಸಂಭ್ರಮ, ಬಿಜೆಪಿಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

WhatsApp Image 2018-06-13 at 1.01.45 PM

ಬೆಂಗಳೂರು, ಜೂ.13-ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರತಿಷ್ಟಿತ ಜಯನಗರದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದು , ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಬಿಜೆಪಿಯ ಭದ್ರಕೋಟೆ ಎನಿಸಿದ್ದ ಜಯನಗರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರು 2889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್.ಪ್ರಹ್ಲಾದ್‍ಬಾಬು ಅವರನ್ನು ಪರಾಭವಗೊಳಿಸಿದ್ದಾರೆ.

WhatsApp Image 2018-06-13 at 10.59.30 AM

ವಿಜೇತ ಅಭ್ಯರ್ಥಿ ಸೌಮ್ಯ ರೆಡ್ಡಿ 54,452ಮತಗಳನ್ನು ಪಡೆದರೆ ಬಿಜೆಪಿಯ ಪ್ರಹ್ಲಾದ್ ಬಾಬು 51,568 ಹಾಗೂ ಪಕ್ಷೇತರ ಅಭ್ಯರ್ಥಿ ರವಿಕೃಷ್ಣ ರೆಡ್ಡಿ 1861ಮತಗಳನ್ನು ಠೇವಣಿ ಕಳೆದುಕೊಂಡಿದ್ದಾರೆ. 848 ಮತಗಳು ನೋಟಾಕ್ಕೆ ಚಲಾವಣೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಕಾಂಗ್ರೆಸ್‍ಗೆ ಇದು ಎರಡನೇ ಗೆಲುವು. ಈ ಹಿಂದೆ ರಾಜರಾಜೇಶ್ವರಿ ನಗರಕ್ಕೆ ನಡೆದ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದರು. ಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದರೊಂದಿಗೆ ವಿಧಾನಸಭೆಯಲ್ಲಿ ಅದರ ಸಂಖ್ಯೆಗೆ 78ಕ್ಕೆ ಏರಿಕೆಯಾಗಿದೆ. ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟು ಭರ್ಜರಿ ಪ್ರಚಾರ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ ಸೇರಿದಂತೆ ಮತ್ತಿತರ ಪ್ರಮುಖರಿಗೆ ತೀವ್ರ ಮುಖಭಂಗವಾಗಿದೆ.

WhatsApp Image 2018-06-13 at 1.01.44 PM

ಕೈ ಹಿಡಿದ ಮತದಾರ:
ಬಹುತೇಕ ಸುಶಿಕ್ಷಿತ ಮತದಾರರನ್ನೇ ಒಳಗೊಂಡಿರುವ ಜಯನಗರ ಬಿಜೆಪಿಯ ಭದ್ರಕೋಟೆಯಾಗಿತ್ತು. ಈ ಕ್ಷೇತ್ರದಿಂದ ಸತತ ಎರಡು ಬಾರಿ ಗೆದ್ದಿದ್ದ ಬಿ.ಎಂ.ವಿಜಯಕುಮಾರ್ ಹಠಾತ್ ನಿಧನರಾಗಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಸೋಮವಾರ ನಡೆದ ಮತದಾನದ ವೇಳೆ ಶೇ.55ರಷ್ಟು ಮತದಾನವಾಗಿತ್ತು. ಬಿಜೆಪಿಯು ವಿಜಯ್‍ಕುಮಾರ್ ಅವರ ಸಾವಿನ ಅನುಕಂಪವನ್ನೇ ಲಾಭ ಪಡೆಯಲು ಸಹೋದರ ಪ್ರಹ್ಲಾದ್ ಬಾಬುಗೆ ಟಿಕೆಟ್ ನೀಡಿತ್ತು. ಆದರೆ ಜಯನಗರದ ಮೇಲೆ ಮೊದಲಿನಿಂದಲೂ ಹಿಡಿತವಿದ್ದ ರಾಮಲಿಂಗಾರೆಡ್ಡಿ ಅವರ ಪ್ರಭಾವ, ಸೌಮ್ಯರೆಡ್ಡಿಯ ಸಮಾಜ ಸೇವೆ, ಬಿಜೆಪಿಯ ಒಳಜಗಳ ಕಾಂಗ್ರೆಸ್‍ಗೆ ವರವಾಗಿ ಪರಿಣಮಿಸಿದೆ.

WhatsApp Image 2018-06-13 at 1.01.41 PM

 

ಪ್ರಾರಂಭದಿಂದಲೇ ಮುನ್ನಡೆ:
ಇನ್ನು ಬೆಳಗ್ಗೆ 8 ಗಂಟೆಯಿಂದ ಜಯನಗರದ ಎಸ್‍ಎಸ್‍ಎಂಆರ್‍ವಿಕೆ ಕಾಲೇಜಿನಲ್ಲಿ ಭಾರೀ ಬಿಗಿಭದ್ರತೆ ನಡುವೆ ಆರಂಭವಾಯಿತು. ಆರಂಭದಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿಯ ಪ್ರಹ್ಲಾದ್ ಬಾಬುಗೆ 3 ಹಾಗೂ ಸೌಮ್ಯ ರೆಡ್ಡಿ 1 ಮತಗಳನ್ನು ಪಡೆದರು. 14 ಟೇಬಲ್ ಹಾಗೂ 16 ಸುತ್ತುಗಳಂತೆ ಮತ ಎಣಿಕೆ ಪ್ರಾರಂಭವಾಯಿತು. ಮೊದಲನೇ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಕಾಂಗ್ರೆಸ್‍ನ ಸೌಮ್ಯರೆಡ್ಡಿ ಮುನ್ನಡೆ ಕಾಯ್ದುಕೊಂಡು ಬಂದರು. 5ನೇ ಸುತ್ತಿನಲ್ಲಿ ಮಾತ್ರ ಒಂದಿಷ್ಟು ಸ್ಪರ್ಧೆವೊಡ್ಡುವ ಸೂಚನೆ ಕಂಡುಬಂದಿತಾದರೂ ಬಳಿಕ ಯಾವ ಸುತ್ತಿನಲ್ಲೂ ಕಾಂಗ್ರೆಸ್‍ಗೆ ಬಿಜೆಪಿ ಪೈಪೆÇೀಟಿ ಒಡ್ಡಲಿಲ್ಲ. ಅಂತಿಮ 16ನೇ ಸುತ್ತಿನಲ್ಲಿ ಕಾಂಗ್ರೆಸ್‍ನ ಸೌಮ್ಯರೆಡ್ಡಿ 10000 ಮತಗಳ ಅಂತರದಿಂದ ಗೆಲುವು ಸಾಧಿಸಿ ಗೆಲುವಿನ ನಗೆ ಬೀರಿದರು.

WhatsApp Image 2018-06-13 at 1.01.35 PM

ಬೆಂಬಲಿಗರ ಸಂಭ್ರಮ:
ಇನ್ನು ಬೆಳಗಿನಿಂದಳೇ ಮತ ಯಂತ್ರದ ಕೇಂದ್ರದ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿಯ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದರು. ಒಂದೊಂದು ಸುತ್ತು ಮತಗಳ ಎಣಿಕೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿಗರು ಸಂಭ್ರಮಿಸಿದರು.

WhatsApp Image 2018-06-13 at 1.07.10 PM

ಜಯನಗರ ರಿಸಲ್ಟ್ : 

ಸೌಮ್ಯ ರೆಡ್ಡಿ (ಕಾಂಗ್ರೆಸ್) : 54457
ಬಿ.ಎನ್. ಪ್ರಹ್ಲಾದ್ ಬಾಬು (ಬಿಜೆಪಿ) : 51568
ರವಿಕೃಷ್ಣಾ ರೆಡ್ಡಿ (ಪಕ್ಷೇತರ) : 1861

WhatsApp Image 2018-06-13 at 9.44.07 AM

WhatsApp Image 2018-06-13 at 9.44.26 AM

WhatsApp Image 2018-06-13 at 9.44.17 AM

Facebook Comments

Sri Raghav

Admin