TRENDING : ಪ್ರಧಾನಿ ಮೋದಿ ಹಾಕಿದ ಫಿಟ್ನೆಸ್ ಚಾಲೆಂಜ್ ಗೆ ಸಿಎಂ ಕುಮಾರಸ್ವಾಮಿ ‘ಪಂಚ್’

ಈ ಸುದ್ದಿಯನ್ನು ಶೇರ್ ಮಾಡಿ

MOdi--01

ನವದೆಹಲಿ, ಜೂ.13-ಖ್ಯಾತನಾಮರ ನಡುವೆ ಫಿಟ್ನೆಸ್ ಸವಾಲು ಮತ್ತು ಪ್ರತಿಸವಾಲುಗಳ ವಿದ್ಯಮಾನ ಮುಂದುವರಿದಿದೆ. ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಒಡ್ಡಿದ್ದ ಫಿಟ್ನೆಸ್ ಸವಾಲಿಗೆ ಕಠಿಣ ವ್ಯಾಯಾಮದ ಮೂಲಕ ದಿಟ್ಟ ಉತ್ತರದ ವಿಡಿಯೋ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಈ ಚಾಲೆಂಜ್ ಪೋಸ್ಟ್ ಮಾಡಿದ್ದಾರೆ.   ಯೋಗ ಮತ್ತು ಟ್ರೇಡ್‍ಮಿಲ್ ನನ್ನ ದಿನನಿತ್ಯದ ವ್ಯಾಯಾಮದ ಭಾಗವಾಗಿವೆ. ಮಿಗಿಲಾಗಿ ನನಗೆ ನನ್ನ ರಾಜ್ಯದ ಆರೋಗ್ಯ ಮತ್ತು ಸಾಮಥ್ರ್ಯದ ಅಭಿವೃದ್ದಿ ಬಗ್ಗೆ ನನಗೆ ಹೆಚ್ಚು ಕಾಳಜಿ ಇದೆ. ಇದಕ್ಕೆ ನಿಮ್ಮ ಸಹಕಾರ ಕೋರುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಮೋದಿ, ಎಚ್‍ಡಿಕೆ ಅವರಿಗಲ್ಲದೇ ಕಾಮನ್‍ವೆಲ್ತ್ ಪದಕ ವಿಜೇತೆ ಮಣಿಕಾ ಬಾತ್ರಾ ಹಾಗೂ 40ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳಿಗೆ ಫಿಟ್ನೆಸ್ ವಿಡಿಯೋ ಪೋಸ್ಟ್ ಮಾಡಿ ದೈಹಿಕ ಸಾಮಥ್ರ್ಯದ ಸವಾಲು ಹಾಕಿದ್ದಾರೆ.

ಮೋದಿ ವಿಡಿಯೋದಲ್ಲಿ ಏನಿದೆ..?

ರಾಜಧಾನಿ ದೆಹಲಿಯ ನಂ.7, ಲೋಕ ಕಲ್ಯಾಣ ಮಾರ್ಗದ ತಮ್ಮ ಅಧಿಕೃತ ನಿವಾಸದ ಹಚ್ಚ ಹಸಿರಿನ ಹುಲ್ಲಿನ ಹಾಸಿನ ಮೇಲೆ
ಟ್ರ್ಯಾಕ್ ಸೂಟ್ ಧರಿಸಿ ಪ್ರಾಣಾಯಾಮಾ ಸೇರಿದಂತೆ ವಿವಿಧ ಕಠಿಣ ಯೋಗಾಭ್ಯಾಸಗಳನ್ನು ಮಾಡಿರುವ ದೃಶ್ಯ ವಿಡಿಯೋದಲ್ಲಿದೆ.
ಇದು ನನ್ನ ಬೆಳಗಿನ ವ್ಯಾಯಾಯ. ನಾನು ಬೆಳಗ್ಗೆ ಯೋಗ ಮಾಡುತ್ತನೆ. ಅಲ್ಲದೇ ಪ್ರಕೃತಿಯ ಭೂಮಿ, ಜಲ, ಅಗ್ನಿ, ವಾಯು, ಹಾಗೂ ಆಕಾಶ-ಈ ಪಂಚಭೂತಗಳಿಂದ ಪ್ರೇರಣೆ ಪಡೆದ ಟ್ರ್ಯಾಕ್ ಮೇಲೆ ನಾನು ನಡೆಯುತ್ತೇನೆ. ಇದು ದೇಹಕ್ಕೆ ತಾಜಾತನ, ಪ್ರಫುಲ್ಲತೆ ಮತ್ತು ಪುನ:ಶ್ಚೇತನ ನೀಡುತ್ತದೆ. ನಾನು ಉಸಿರಾಟದ ವ್ಯಾಯಾಮ ಸಹ ಮಾಡುತ್ತೇನೆ. . #HumFitTohIndiaFit ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Untitled-6

ಎಚ್‍ಡಿಕೆ ಪ್ರತಿಕ್ರಿಯೆ :
ಆತ್ಮೀಯ ನರೇಂದ್ರ ಮೋದಿಜೀ ಅವರೆ ನನ್ನ ಆರೋಗ್ಯದ ಬಗ್ಗೆ ನಿಮಗೆ ಇರುವ ಕಾಳಜಿ ಮತ್ತು ಕಳಕಳಿಗೆ ನಾನು ಗೌರವಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಎಲ್ಲದಕ್ಕೂ ದೈಹಿಕ ಸಾಮರ್ಥ್ಯ (ಫಿಸಿಕಲ್ ಫಿಟ್ನೆಸ್) ತುಂಬಾ ಮುಖ್ಯ ಎಂಬುದು ನನ್ನ ನಂಬಿಕೆ. ಯೋಗ ಮತ್ತು ಟ್ರೇಡ್‍ಮಿಲ್ ನನ್ನ ದಿನನಿತ್ಯದ ವ್ಯಾಯಾಮದ ಭಾಗವಾಗಿವೆ. ಮಿಗಿಲಾಗಿ ನನಗೆ ನನ್ನ ರಾಜ್ಯದ ಆರೋಗ್ಯ ಮತ್ತು ಸಾಮರ್ಥ್ಯದ  ಅಭಿವೃದ್ಧಿ ಬಗ್ಗೆ ನನಗೆ ಹೆಚ್ಚು ಕಾಳಜಿ ಇದೆ. ಇದಕ್ಕೆ ನಿಮ್ಮ ಸಹಕಾರ ಕೋರುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

 

 

Untitled-8

Untitled-9

Untitled-10

Untitled-11

Untitled-12

Untitled-13

 

Facebook Comments

Sri Raghav

Admin