ಭಾಷಾ ನೀತಿ ಜಾರಿಗೆ ತರದ ಖಾಸಗಿ ಶಾಲೆಗಳ ಮಾನ್ಯತೆ ರದ್ದು..?

ಈ ಸುದ್ದಿಯನ್ನು ಶೇರ್ ಮಾಡಿ

School-Chidrence

ಬೆಂಗಳೂರು, ಜೂ.13-ಕನ್ನಡ ಮಾಧ್ಯಮ ಭಾಷಾ ನೀತಿಯನ್ನು ಜಾರಿಗೆ ತರದ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಲು ಕ್ರಮಕೈಗೊಳ್ಳುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ದಕ್ಷಿಣ, ಉತ್ತರ, ಗ್ರಾಮಾಂತರ ಶೈಕ್ಷಣಿಕ ಜಿಲ್ಲೆಗಳ ಬಿಇಒ, ಡಿಡಿಪಿಐಗಳ ಜೊತೆ ಸಭೆ ನಡೆಸಲಾಯಿತು.

ಬೆಂಗಳೂರು ದಕ್ಷಿಣ ವಲಯದ ಡಿಡಿಪಿಐ ಮತ್ತು ಬಿಇಒಗಳು ಬಹುತೇಕ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಭಾಷಾ ಮಾಧ್ಯಮ ಕಾಯ್ದೆಯನ್ನು ಜಾರಿಗೆ ತರುವ ಪ್ರಾ ಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಉತ್ತರವಲಯದ ಡಿಡಿಪಿಐ ಸಂಪೂರ್ಣ ಅಸಮರ್ಥ ರಾಗಿದ್ದಾರೆ. ಅವರ ವೈಫಲ್ಯ ಎದ್ದು ಕಾಣುತ್ತಿದೆ. ಗ್ರಾಮಾಂತರ ಭಾಗದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ಕಡಿಮೆ ಇರುವುದರಿಂದ ಕಾಯ್ದೆ ಅಷ್ಟೊಂದು ಪರಿಣಾಮಕಾರಿಯಾಗುವುದಿಲ್ಲ ಎಂದರು.

ಇಂಗ್ಲೀಷ್ ಮಾಧ್ಯಮ ಸಿಬಿಎಸ್‍ಇ, ಐಸಿಎಸ್‍ಇ ಸೇರಿದಂತೆ ಯಾವುದೇ ಪಠ್ಯಕ್ರಮವಾಗಿದ್ದರೂ ಅಲ್ಲಿ ಭಾಷಾ ಅಧಿನಿಯಮದ ಪ್ರಕಾರ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲೇಬೇಕು, ಕಲಿಸದೆ ಇದ್ದರೆ 1915ರಲ್ಲಿ ರೂಪಿಸಿದ ಕಾನೂನಿನ ಪ್ರಕಾರ ಡಿಡಿಪಿಐಗಳು ದಂಡ ವಿಧಿಸುತ್ತಾರೆ. ಎರಡನೇ ಹಂತದಲ್ಲಿ ಶಾಲೆಯ ಮಾನ್ಯತೆಯನ್ನೇ ರದ್ದು ಮಾಡಲು ಅವಕಾಶವಿದೆ. ಇನ್ನು 15 ದಿನಗಳೊಳಗಾಗಿ ಎಲ್ಲಾ ಶಾಲೆಗಳು ಕನ್ನಡ ಭಾಷಾ ಮಾಧ್ಯಮವನ್ನು ಜಾರಿಗೊಳಿಸಬೇಕು, ನಿರಾಕರಿಸುವ ಶಾಲೆಗಳ ಮಾನ್ಯತೆಯನ್ನು ಮುಲಾಜಿಲ್ಲದೆ ರದ್ದುಪಡಿಸಲಾಗುವುದು.  ಕನ್ನಡ ಅಭಿವೃದ್ಧಿ ಪ್ರಾಧಿಕಾರಿ ಪ್ರತ್ಯೇಕ ತಂಡ ರಚಿಸಿಕೊಂಡು ಖಾಸಗಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಲಿದೆ, ಆ ವೇಳೆ ಭಾಷಾ ನಿಯಮ ಜಾರಿಯಾಗದಿರುವುದು ಕಂಡು ಬಂದರೆ ಮಾನ್ಯತೆ ರದ್ದುಪಡಿಸಲು ಸ್ಥಳದಲ್ಲೇ ಶಿಫಾರಸು ಮಾಡುವುದಾಗಿ ಹೇಳಿದರು.

Facebook Comments