ಸಚಿವ ಸ್ಥಾನಕ್ಕಾಗಿ ಡಿಸಿಎಂ ಪರಂ ಮನೆ ಮುಂದೆ ಶಾಮನೂರು ಬೆಂಬಲಿಗರಿಂದ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Shyamanuru-Shivashanrappa

ಬೆಂಗಳೂರು, ಜೂ.13- ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಲಾಯಿತು. ಸದಾಶಿವ ನಗರದ ಪರಮೇಶ್ವರ್ ನಿವಾಸದ ಎದುರು ನಡೆದ ಪ್ರತಿಭಟನೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಬೆಂಬಲಿಗರು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಸ್ಥಳೀಯ ನಗರ ಪಾಲಿಕೆ ಸದಸ್ಯರು ಪಾಲ್ಗೊಂಡು ಒತ್ತಾಯಿಸಿದರು.

ಎರಡನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಶಾಮನೂರು ಅವರಿಗೆ ಸಚಿವ ಸ್ಥಾನ ಕೊಡುವಂತೆ ಮನವಿ ಮಾಡಿದ ಅವರು, ಒಂದು ವೇಳೆ ಸ್ಥಾನ ನೀಡದಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ. ಶಾಮನೂರು ಅವರಿಗೆ ಮಂತ್ರಿ ಸ್ಥಾನ ಕೊಡಿ, ಇಲ್ಲವೆ ದಾವಣಗೆರೆಯಲ್ಲಿ ಕಾಂಗ್ರೆಸ್‍ನ್ನು ಮರೆತುಬಿಡಿ. ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‍ಗೆ ದಾವಣಗೆರೆಯಲ್ಲಿ ಕಷ್ಟವಾಗಲಿದೆ ಎಂದು ಹೇಳಿದರು. ಶ್ಯಾಮನೂರು ಬೆಂಬಲಿಗರಿಗೆ ಭರವಸೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಆಯ್ತು ಬಿಡ್ರಪ್ಪ ಮಾಡೋಣ… ಎಂದು ಹೇಳಿದರು. ಇದೇವೇಳೆ ದಿನೇಶ್‍ಗುಂಡೂರಾವ್ ಅವರಿಗೂ ಪ್ರತಿಭಟನಾ ಕಾರರು ಮನವಿ ಸಲ್ಲಿಸಿದರು.

Facebook Comments

Sri Raghav

Admin