ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ವರ್ಣರಂಜಿತ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Fifa--01

ಮಾಸ್ಕೋ.ಜೂ.14 : ಇಡೀ ಜಗತ್ತೇ ಕಾತುರದಿಂದ ಕಾಯುತ್ತಿದ್ದ 21ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಮಾಸ್ಕೋದ ಲಝ್ನಿಕಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದ ಮೂಲಕ ಟೂರ್ನಿ ವಿದ್ಯುಕ್ತವಾಗಿ ಆರಂಭಗೊಂಡಿತು. ಬ್ರಿಟೀಷ್ ಪಾಪ್ ಸ್ಟಾರ್ ರಾಬಿ ವಿಲಿಯಮ್ಸ್ ಸಂಗೀತ ರಸಮಂಜರಿ ಕಾರ್ಯಕ್ರಮ ಈ ಬಾರಿ ಫಿಫಾ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಸಮಾರಂಭದ ಕಳೆ ಹೆಚ್ಚಿಸಿತು. ರಾಬಿಯ ಪ್ರಖ್ಯಾತ ಎಂಜೆಲ್ಸ್ ಹಾಡಿನ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನ ರಂಜಿಸಿದರು. ಲೆಟ್ ಮಿ ಎಂಟರ್ಟೈನ್ ಯು ಹಾಡಿನ ಮೂಲಕ ಫಿಫಾ ಉದ್ಘಾಟನಾ ಕಾರ್ಯಕ್ರಮ ಆರಂಭಿಸಿದ ರಾಬಿ, ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು.

Fifa--06

ಆರಂಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮೀರಿ ಪುಟೀನ್ , ಎಲ್ಲರನ್ನ ಸ್ವಾಗತಿಸಿದರು.ಫುಟ್ಬಾಲ್‌ನಿಂದ ನಾವೆಲ್ಲರು ಒಂದಾಗಿದ್ದೇವೆ. ರಷ್ಯಾಗೆ ಆಗಮಿಸಿರುವ ತಂಡಗಳು, ಆಟಗಾರರು, ಅಭಿಮಾನಿಗಳು ಸೇರಿದಂತೆ ಎಲ್ಲರು ಅಮೂಲ್ಯ ಸಮಯವನ್ನ ಸಂತಸದಿಂದ ಕಳೆಯಿರಿ ಎಂದು ಪುಟೀನ್ ಹೇಳಿದರು. ಫುಟ್ಬಾಲ್ ಮ್ಯಾಸ್ಕಟ್ ಜೊತೆ ಆಗಮಿಸಿದ ವಿಶ್ವಕಪ್ ಹೀರೋ ಬ್ರೆಜಿಲ್‌ನ ರೋನಾಲ್ಡ, ಪೆನಾಲ್ಟಿ ಶೂಟೌಟ್ ಕಿಕ್ ಮಾಡೋ ಮೂಲಕ 21ನೇ ಫುಟ್ಬಾಲ್ ಟೂರ್ನಿಯ ಅವಿಸ್ಮರಣೀಯ ಕ್ಷಣದಲ್ಲಿ ಪಾಲ್ಗೊಂಡರು.

Fifa--05

30 ದಿನಗಳ ಪಂದ್ಯಾವಳಿಗಾಗಿ ಮಾಸ್ಕೋ, ಸೆಂಟ್‍ಪೀಟರ್ಸ್ ಬರ್ಗ್, ಸೋಚಿ ಸೇರಿದಂತೆ ವಿವಿಧ ನಗರಗಳಲ್ಲಿ 12 ಕ್ರೀಡಾಂಗಣಗಳು ನಿರ್ಮಾಣವಾಗಿದ್ದು, ಒಟ್ಟು 64 ಪಂದ್ಯಗಳು ನಡೆಯಲಿವೆ. 2018ರ ಫೀಫಾ ಫುಟ್ಬಾಲ್ ವಿಶ್ವಕಪ್‍ನಲ್ಲಿ ಒಟ್ಟು 32 ತಂಡಗಳು ಸೆಳೆಸಲಿವೆ. ಅರ್ಜೆಂಟೈನಾ, ಬ್ರೆಜಿಲ್, ಜರ್ಮನಿ, ಸ್ಪೇನ್, ಪೋರ್ಚುಗಲ್, ಫ್ರಾನ್ಸ್ ಮತ್ತು ಇಂಗ್ಲೆಂಡ್ ತಂಡಗಳು ಈ ಬಾರಿ ಅತ್ಯಂತ ಪ್ರಬಲ ತಂಡಗಳೆಂದು ಪರಿಗಣಿಸಲಾಗಿದೆ.

Fifa--04

ಈ ಬಾರಿ ವಿಶ್ವಕಪ್ ಫುಟ್ಬಾಲ್ ಮಹಾಸಮರದಲ್ಲಿ ಅಪ್ರತಿಮ ಆಟಗಾರರಾದ ಲಿಯೋನೆಲ್ ಮೆಸಿ, ನೈಮರ್, ಟೋನಿಕ್ರೂಜ್, ಇಸ್ಕೋ, ಕ್ರಿಸ್ಟಿಯಾನೊ ರೊನಾಲ್ಡಿನೋ, ಗೇಬ್ರಿಯಲ್, ಜೀಸಸ್ ಪಂದ್ಯಗಳು ಹ್ಯಾರಿಕ್ಯಾನ್ ಮತ್ತು ಥಾಮಸ್ ಮುಲ್ಲರ್ ಗೋಲು ಬಾರಿಸುವ ನೆಚ್ಚಿನ ಆಟಗಾರರೆನಿಸಿದ್ದಾರೆ.
ಫುಟ್ಬಾಲ್ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳುತ್ತಿರುವ 30 ರಾಷ್ಟ್ರಗಳಲ್ಲಿ ಐಸ್‍ಲ್ಯಾಂಡ್ ಅತ್ಯಂತ ಸಣ್ಣ ದೇಶ ಎನಿಸಿದೆ. ಈಜಿಪ್ಟ್‍ನ 45 ವರ್ಷದ ಎಸಾಂಹಲ್ ಹವರಿ (45) ಅತ್ಯಂತ ಹಿರಿಯ ಆಟಗಾರ ಎನಿಸಿದ್ದಾರೆ. ಕ್ರೊವೇಷಿಯಾದ ಲೌರ್ರೇ ಕಾಲಿನಿಕ್ ಅತಿ ಎತ್ತರ (6.6 ಅಡಿ) ದ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

Fifa--02

ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರ ದಾಳಿಯ ಆತಂಕದ ಹಿನ್ನೆಲೆಯಲ್ಲಿ ರಷ್ಯಾದ್ಯಂತ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಕ್ರೀಡಾಂಗಣಗಳ ಸುತ್ತಮುತ್ತ ಕಮ್ಯಾಂಡೋಗಳನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ.

Facebook Comments

Sri Raghav

Admin