ಗೂಗಲ್‍ನಲ್ಲೂ ಫಿಫಾ ವಿಶ್ವಕಪ್ ಫುಟ್ಬಾಲ್ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Google--01
ನವದೆಹಲಿ, ಜೂ.14- ಇಂದಿನಿಂದ ರಷ್ಯಾದಲ್ಲಿ ಫಿಫಾ ವಿಶ್ವಕಪ್‍ನ ಜ್ವರ ಕಾವೇರಲಿದ್ದು ಕಾಲ್ಚೆಂಡಿನ ಆಟದ ಕಾಲ್ಚೆಳಕ ಮತ್ತು ಗೋಲ್ಮಿಂಚು ನೋಡಲು ಜಗತ್ತಿನ ಕೋಟ್ಯಾಂತರ ಕ್ರೀಡಾಭಿಮಾನಿಗಳು ಕಾತುರದಿಂದ ಕಾತರಿಸುತ್ತಿದ್ದಾರೆ. ಎಲ್ಲೆಡೆ ಫುಟ್ಬಾಲ್ ಸಂಭ್ರಮೋ ಸಂಭ್ರಮ. ಇದರ ರಂಗನ್ನು ಮತ್ತಷ್ಟು ರಂಗೇರಿಸುವುದಕ್ಕಾಗಿಯೇ ಗೂಗಲ್ ಕೂಡ ಫಿಫಾ ವಿಶ್ವಕಪ್‍ನ ಸಂಭ್ರಮದಲ್ಲಿದೆ. ಕ್ರೀಡಾಲೋಕದ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ, ಮಿಲಿಯನ್‍ಗಟ್ಟಲೆ ಬಹುಮಾನ ಮೊತ್ತ, ಕ್ಷಣಕ್ಷಣಕ್ಕೂ ಕುತೂಹಲ, ಕಣ್ಣಿನ ರೆಪ್ಪೆಯನ್ನು ಮಿಟುಕಿಸದಂತೆ ನೋಡುವಂತೆ ಮಾಡುವ ಫುಟ್ಬಾಲ್‍ನ ಮಾಯೆಯೇ ಅಂಥದ್ದು.

ತಮ್ಮ ನೆಚ್ಚಿನ ತಂಡಗಳನ್ನು ಉತ್ತೇಜಿಸುವುದು ಅಂದರೆ ಬಲು ಅಚ್ಚುಮೆಚ್ಚು. ಅದೇ ರೀತಿ ಗೂಗಲ್ ಕೂಡ ತಮ್ಮ ಡೂಡಲ್‍ನಲ್ಲಿ ಗೋಲು ಒಡೆಯುವ ಚಿತ್ರವನ್ನೇ ಬಳಸಿಕೊಂಡಿರುವುದು ಫುಟ್ಬಾಲ್ ಪ್ರಿಯರ ಗಮನ ಸೆಳೆದಿದೆ. ಪೆನಾಲ್ಟಿ ಕಿಕ್, ಗೋಲ್‍ಕೀಪರ್ ಗೋಲು ಉಳಿಸುವ ಚಾಕಚಕ್ಯತೆಗಳು ಫುಟ್ಬಾಲ್ ಪ್ರಿಯರ ಗಮನ ಸೆಳೆದಿದ್ದು, ಈ ಬಾರಿ ತಮ್ಮ ನೆಚ್ಚಿನ ತಂಡಗಳು ಪ್ರಶಸ್ತಿಗಳನ್ನು ಗೆದ್ದು ಬೀಗಲಿ ಎಂದು ಹಾರೈಸುತ್ತಿದ್ದಾರೆ.

ಫುಟ್ಬಾಲ್ ಆಟಕ್ಕೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದು ಅರ್ಜೆಂಟೀನಾದ ಲಿಯೋನ್ ಮೆಸ್ಸಿ , ಪೋರ್ಚಿಗಲ್‍ನ ಕ್ರಿಸ್ಟಿಯಾನೋ ರೋನಾಲ್ಡೋ, ಬ್ರಿಜಿಲ್‍ನ ನೈಮಾರ್, ಈಜಿಪ್ಟ್‍ನ ಮೋ ಸಲ್ಲಾರಂತಹ ಆಟಗಾರ ಆಟವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರಿಸುತ್ತಿದೆ. ಇಂದಿನಿಂದ ಆರಂಭಗೊಳ್ಳಲಿರುವ ಫಿಫಾ ವಿಶ್ವಕಪ್ ಜುಲೈ 15ರವರೆಗೂ 11 ನಗರಗಳು, 12 ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಬಾರಿಯ ಫಿಫಾ ವಿಶ್ವಕಪ್‍ನಲ್ಲಿ ಚಾಂಪಿಯನ್ಸ್ ಆಗುವ ಸಾಲಿನಲ್ಲಿ ಸ್ಪೇನ್ ತಂಡ ಹಾಟ್‍ಫೇವರಿಟ್ ಆಗಿದ್ದರೆ, ಈ ಹಿಂದೆ ವಿಶ್ವಚಾಂಪಿಯನ್ಸ್ ಆಗಿದ್ದ ಪೋರ್ಚುಗಲ್, ಫ್ರಾನ್ಸ್ , ಅರ್ಜೆಂಟೇನಾ, ಬ್ರಿಜಿಲ್ ಕೂಡ ಪ್ರಶಸ್ತಿ ಗೆದ್ದು ಬೀಗುವ ರೇಸ್‍ನಲ್ಲಿದೆ , ಈ ತಂಡಗಳನ್ನೂ ಗೆಲ್ಲುವ ಚಾಲ್ತಿ ಹೊಂದಿರುವ ಇಂಗ್ಲೆಂಡ್, ಮೆಕ್ಸಿಕೋ, ಉರುಗ್ವೆ ಕೂಡ ಫುಟ್ಬಾಲ್ ಪ್ರೇಮಿಗಳ ಮೆಚ್ಚಿನ ತಂಡಗಳಾಗಿದ್ದು ಯಾವ ತಂಡ ಚಾಂಪಿಯನ್ಸ್ ಆಗುತ್ತದೆ ಎನ್ನುವುದೇ ಕುತೂಹಲಕರ ಸಂಗತಿ.

Facebook Comments

Sri Raghav

Admin