ದಾವಣಗೆರೆಯಲ್ಲಿ ಭೀಕರ ರಸ್ತೆ ಅಪಘಾತ : ಮಾಜಿ ಶಾಸಕರ ಮೊಮ್ಮಗ, ಸ್ನೇಹಿತ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

acci

ದಾವಣಗೆರೆ ಜೂ.14-  ಅತಿ ವೇಗದಿಂದಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ತೈಲ ಟ್ಯಾಂಕರ್‍ಗೆ ಅಪ್ಪಳಿಸಿದ ಪರಿಣಾಮ ಮಾಜಿ ಶಾಸಕರ ಮೊಮ್ಮಗ ಹಾಗೂ ಈತನ ಸ್ನೇಹಿತ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊನ್ನಾಳಿ ಮಾಜಿ ಶಾಸಕ ಬಸವನಗೌಡ ಅವರ ಮೊಮ್ಮಗ ಜಯದೀಪ್ ಗೌಡ(22) ಹಾಗೂ ಈತನ ಸ್ನೇಹಿತ ಸರೋವರ್(25)ಮೃತಪಟ್ಟ ದುರ್ದೈವಿಗಳು. ಅರಿವಳಿಕೆ ತಜ್ಞರಾಗಿರುವ ಡಾ.ಡಿ.ಬಿ. ಪ್ರಕಾಶ್ ಅವರ ಪುತ್ರನಾದ ಜಯದೀಪ್ ಗೌಡ ತನ್ನ ಸ್ನೇಹಿತ ಸರೋವರ್ ಜೊತೆ ಕಾರ್ಯ ನಿರ್ಮಿತ್ತ ಚಿತ್ರದುರ್ಗಕ್ಕೆ ತೆರಳಿದ್ದು ರಾತ್ರಿ ದಾವಣಗೆರೆಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ 4ರ ಬಾಡಾ ಕ್ರಾಸ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಕ್ಕದ ರಸ್ತೆಗೆ ಜಿಗಿದು ಬೆಂಗಳೂರಿನ ಕಡೆ ಹೋಗುತ್ತಿದ್ದ ಪೆಟ್ರೋಲಿಯಂ ಟ್ಯಾಂಕರ್ ಲಾರಿಗೆ ಅಪ್ಪಳಿಸಿ ಪುನಃ ರಸ್ತೆಗೆ ಹಾರಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಜಯದೀಪ್ ಗೌಡ ಹಾಗೂ ಸರೋವರ್ ಸ್ಥಳದಲ್ಲೇ ಸಾವನ್ನಪ್ಪಿದ್ದು , ಗುರುತಿಸಲಾಗದಷ್ಟು ದೇಹ ರಕ್ತಸಿಕ್ತವಾಗಿವೆ. ಸುದ್ದಿ ತಿಳಿದ ಸಂಚಾರಿ ಠಾಣೆ ಪೊ ಲೀಸರು ಸ್ಥಳಕ್ಕೆ ದೌಡಾಯಿಸಿ ಕಾರಿನೊಳಗೆ ಸಿಕ್ಕಿಕೊಂಡು ಮೃತಪಟ್ಟಿದ್ದ ಇಬ್ಬರ ಶವಗಳನ್ನು ಹೊರತೆಗೆದು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin