ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಹೇಗೆ ಬುದ್ಧಿಶಕ್ತಿಯಿಂದ ಸಾಧಿಸುತ್ತಾನೋ ಹಾಗೆ ಕಾರ್ಯಸಿದ್ಧಿಯನ್ನು ಶಸ್ತ್ರಗಳಿಂದಾಗಲೀ, ಆನೆಗಳಿಂದಾಗಲೀ, ಕುದುರೆಗಳಿಂದಾಗಲೀ, ಕಾಲಾಳುಗಳಿಂದಾಗಲೀ ಪಡೆಯಲಾಗುವುದಿಲ್ಲ. -ಪಂಚತಂತ್ರ, ಮಿತ್ರಭೇದ

Rashi

ಪಂಚಾಂಗ : ಗುರುವಾರ 14.06.2018

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.46
ಚಂದ್ರ ಉದಯ ಬೆ.06.14 / ಚಂದ್ರ ಅಸ್ತ ರಾ.07.25
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ರಾ.09.42)
ನಕ್ಷತ್ರ: ಮೃಗಶಿರಾ (ಮ.02.04) / ಯೋಗ: ಶೂಲ-ಗಂಡ (ಬೆ.05.21-ರಾ.01.22)
ಕರಣ: ಕಿಂಸ್ತುಘ್ನ-ಭವ (ಬೆ.11.28-ರಾ.09.42) / ಮಳೆ ನಕ್ಷತ್ರ: ಮೃಗಶಿರಾ
ಮಾಸ: ವೃಷಭ / ತೇದಿ: 31

ಇಂದಿನ ವಿಶೇಷ:

ರಾಶಿ ಭವಿಷ್ಯ  :  

ಮೇಷ : ಪತ್ನಿಯ ಆರೋಗ್ಯದಲ್ಲಿ ತುಸು ಬದಲಾ ವಣೆ ಕಾಣಬಹುದು. ವಾಹನ ಖರೀದಿಸುವಿರಿ
ವೃಷಭ : ಪ್ರೇಮಿಗಳು ಕಾನೂನಿನ ತೊಡಕಿನಲ್ಲಿ ಸಿಲುಕುವರು. ಆತುರದ ತೀರ್ಮಾನ ಒಳ್ಳೆಯದಲ್ಲ
ಮಿಥುನ: ಆತಂಕಗಳು ನಿವಾರಣೆಯಾದರೂ ಮನಸ್ಸಿನಲ್ಲಿ ಭೀತಿ ಇದ್ದೇ ಇರುತ್ತದೆ
ಕಟಕ : ಅಣ್ಣ-ತಮ್ಮಂದಿರು ನಿಮ್ಮ ವಿರುದ್ಧ ತಿರುಗಿ ಬೀಳುವರು
ಸಿಂಹ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರಿ
ಕನ್ಯಾ: ಉದ್ಯೋಗ ಸಮಸ್ಯೆ ಗಳು ಬಗೆಹರಿಯುತ್ತವೆ, ಇದರಿಂದ ಮಾನಸಿಕ ಕ್ಲೇಶ ಕಡಿಮೆಯಾಗುತ್ತದೆ
ತುಲಾ: ಸಾಧು-ಸಂತರ ಅನುಗ್ರಹ ದೊರೆಯುತ್ತದೆ
ವೃಶ್ಚಿಕ: ಕಠೋರ ಮಾತುಗಳನ್ನಾಡುವಿರಿ
ಧನುಸ್ಸು: ಸಮಾಜ ಸೇವಕರಿಗೆ ಜವಾಬ್ದಾರಿಯುತ ಕೆಲಸ ಬೀಳುತ್ತದೆ. ಆಕಸ್ಮಿಕ ಧನಲಾಭವಾಗಲಿದೆ
ಮಕರ: ಸ್ತ್ರೀಯರಿಂದ ಕಲಹ ಆಗುವ ಸೂಚನೆಗಳಿವೆ
ಕುಂಭ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ
ಮೀನ: ಹಿತಶತ್ರುಗಳಿಂದ ಸಮಸ್ಯೆಯಲ್ಲಿ ಸಿಲುಕುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin