ಭಾರತ-ಆಫ್ಘಾನ್ ಟೆಸ್ಟ್ : ಧವನ್ – ವಿಜಯ್‍ರ ಆಕರ್ಷಕ ಶತಕದ ಜೊತೆಯಾಟ..!

ಈ ಸುದ್ದಿಯನ್ನು ಶೇರ್ ಮಾಡಿ

dhavan
ಬೆಂಗಳೂರು, ಜೂ.14- ಭಾರತದ ದಾಂಡಿಗರಾದ ಶಿಖರ್ ಧವನ್ ಹಾಗೂ ಮುರಳಿ ವಿಜಯ್‍ರ ಆಕರ್ಷಕ ಜೊತೆಯಾಟದ ಎದುರು ಆಫ್ಘಾನ್ ಬೌಲರ್‍ಗಳು ಬಸವಳಿದಿದ್ದಾರೆ.  ಸಿಲಿಕಾನ್ ಸಿಟಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕಮೇವ ಟೆಸ್ಟ್‍ನಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಅಜೆಂಕ್ಯಾ ರಹಾನೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಆರಂಭಿಕ ದಾಂಡಿಗರಾಗಿ ಅಂಗಳಕ್ಕಿಳಿದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಆಫ್ಘಾನ್ ಬೌಲರ್‍ಗಳನ್ನು ಆರಂಭದಿಂದಲೂ ದಂಡಿಸಿ 78 ಓವರ್’ಗಳಿಗೆ 6 ವಿಕೆಟ್’ಗಳನ್ನು ಕಳೆದುಕೊಂಡು 347 ರನ್‍ಗಳನ್ನು ಪೇರಿಸಿದರು. ಭೋಜನ ವಿರಾಮದ ನಂತರ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಶಿಖರ್‍ಧವನ್ 96 ಎಸೆತಗಳನ್ನು ಎದುರಿಸಿ 19 ಬೌಂಡರಿ ಹಾಗೂ 3 ಸಿಕ್ಸರ್‍ಗಳ ಸಹಿತ 107 ರನ್‍ಗಳನ್ನು ಗಳಿಸಿ ಯಾಮಿನ್ ಅಹಮದ್ ಜೈ ಬೌಲಿಂಗ್‍ನಲ್ಲಿ ಮೊಹಮ್ಮದ್ ನಬಿಗೆ ಕ್ಯಾಚ್ ನೀಡಿ ಹೊರ ನಡೆದರು. ಈ ಜೋಡಿ ಬೇರ್ಪಡುವ ಮುನ್ನ 168 ರನ್‍ಗಳ ಜೊತೆಯಾಟವಾಡಿತ್ತು. ಮುರಳಿ ವಿಜಯ್ ಕೂಡ 153 ಎಸೆತಗಳನ್ನು ಎದುರಿಸಿ 15 ಬೌಂಡರಿ, 1 ಸಿಕ್ಸರ್ ಸಹಿತ 105 ರನ್ ಗಳಿಸಿ ಶತಕ ದಾಖಲಿಸಿದರು.  ಕನ್ನಡಿಗ ಕೆ.ಎಲ್. ರಾಹುಲ್ 64 ಎಸೆತ ಗಳಲ್ಲಿ 54 ರನ್ ಗಳಿಸಿ ಯಮಿನ್ಗೆ ವಿಕೆಟ್ ಒಪ್ಪಿಸಿದರು . ಪೂಜಾರ 35 ರನ್, ರಹಾನೆ 10 ರನ್ ಕಾರ್ತಿಕ್ 4 ರನ್ ಗಳಿಸಿ ಔಟಾದರೆ, ಪಾಂಡ್ಯ 10 ರನ್, ಅಶ್ವಿನ್ 7 ರನ್ ಗಳಿಸಿ ಆಟ ಮುಂದುವರೆಸಿದ್ದಾರೆ.. ಇನ್ನು ಅಫ್ಘಾನ್ನಿಸ್ತಾನದ ಪರ ಯಾಮಿನ್ 2 ವಿಕೆಟ್, ವಫಾದರ್, ರಶೀದ್ ಖಾನ್, ಮಿಜಿಬ್ ರೆಹಮ್ಮನ್ ತಲಾ 1 ವಿಕೆಟ್ ಪಡೆದಿದ್ದಾರೆ.

Facebook Comments

Sri Raghav

Admin