ಕಬಿನಿ ಜಲಾಶಯ ಭರ್ತಿ, ನದಿ ಪಾತ್ರದ ಜನರಿಗೆ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kabini-Dam--01

ಮೈಸೂರು,ಜೂ.14-ಜಿಲ್ಲೆಯ ಎಚ್.ಡಿ.ಕೋಟೆ ಬಳಿ ಇರುವ ಕಬಿನಿ ಜಲಾಶಯ ತುಂಬುವ ಹಂತ ತಲುಪಿದ್ದು, ಇಂದು ಸಂಜೆ ನದಿಗಳಿಗೆ ನೀರು ಹೊರ ಬಿಡಲಾಗುತ್ತಿದೆ. ಹಾಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಲ್ಲಿ 2276.55 ಅಡಿ ನೀರು ಕಬಿನಿಯಲ್ಲಿ ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 2284.00 ಅಡಿಗಳು. ಕೇರಳದ ವೈನಾಡಿನಲ್ಲಿ ಇನ್ನೂ ಮಳೆಯಾಗುತ್ತಿದೆ. ಹಾಗಾಗಿ ಹೆಚ್ಚಿನ ಮಟ್ಟದಲ್ಲಿ ನೀರು ಬರುವುದರಿಂದ ಜಲಾಶಯದಲ್ಲಿ ಸಂಗ್ರಹ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನೀರನ್ನು ನದಿಗಳಿಗೆ ಹರಿಸಲಾಗುತ್ತದೆ.   ಜಲಾಶಯಕ್ಕೆ 22098 ಕ್ಯೂಸೆಕ್ ನೀರು ಹರಿದುಬರುತ್ತಿದೆ. 100 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು , ಸಂಜೆಯ ನಂತರ 10 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 2248.75 ಅಡಿ ನೀರು ಸಂಗ್ರಹವಾಗಿತ್ತು. ನಿನ್ನೆ ಒಂದೇ ದಿನ ಕಬಿನಿಗೆ 22 ಸಾವಿರ ಕ್ಯೂಸೆಕ್ ನೀರು ಹರಿದುಬಂದಿದೆ. ನದಿಗಳಿಗೆ ಹೆಚ್ಚು ನೀರು ಬಿಡುತ್ತಿರುವುದರಿಂದ ಜನರು ನದಿಗೆ ಇಳಿಯುವುದು, ಜಾನುವಾರು ತೊಳೆಯುವುದು ಮತ್ತಿತರ ಕೆಲಸಗಳಿಗೆ ಮುಂದಾಗಬಾರದು. ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

Facebook Comments

Sri Raghav

Admin