ನೈಜ ಘಟನೆಗಳ ‘ಕಟ್ಟುಕಥೆ’ ನಾಳೆ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

kattu-kathe-2
ಬೆಳ್ಳಿ ಪರದೆ ಮೇಲೆ ಯುವ ಪಡೆಗಳೆಲ್ಲ ಸೇರಿಕೊಂಡು ಕಟ್ಟುಕಥೆಯನ್ನು ಹೇಳಲು ಹೊರಟಿದ್ದಾರೆ. ಈ ವಾರ ಚಿತ್ರವು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ.  ರಾಜ್ ಪ್ರವೀಣ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಟ್ಟುಕಥೆ ಚಿತ್ರವು ಕೆಲ ನೈಜ ಘಟನೆಗಳನ್ನು ಒಳಗೊಂಡಂತೆ ಒಂದು ಕ್ರೈಂ ಥ್ರಿಲ್ಲರ್ ಕಥಾನಕವನ್ನು ತೆರೆಮೇಲೆ ಬರುತ್ತಿದೆ. ಹಿರಿಯ ನಟ ರಾಜೇಶ್ ನಟರಂಗ ಈ ಚಿತ್ರದಲ್ಲಿ ಒಬ್ಬ ಕ್ರೈಂ ಪೊ ಲೀಸ್ ಆಫೀಸರ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಮೈಸೂರಿನ ಮಹಾಲಕ್ಷ್ಮಿ ಸ್ವೀಟ್ಸ್‍ನ ಮಹಾದೇವ್ ಇದೇ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಸಹನಿರ್ಮಾಪಕಿಯಾಗಿ ಸವಿತಾ ಅವರು ಕೆಲಸ ಮಾಡಿದ್ದಾರೆ.

ಬ್ಯೂಟಿಫುಲ್ ಮನಸುಗಳು ಚಿತ್ರದಲ್ಲಿ ನಟಿಸಿದ್ದ ತುಮಕೂರು ಮೂಲದ ನಟಿ ಸ್ವಾತಿ ಕೊಂಡೆ ಈ ಚಿತ್ರದಲ್ಲಿ ಸೂರ್ಯ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಇನ್ನು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದು ರಾಜ್ ಪ್ರವೀಣ್ ಅವರೇ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರಾಗ ಚಿತ್ರದಲ್ಲಿ ಅಂಧನಾಗಿ ಮನಮಿಡಿಯುವ ಅಭಿನಯ ನೀಡಿದ್ದ ನಟ ಮಿತ್ರ ಅವರೂ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿ ದ್ದಾರೆ.
ನಿರ್ಮಾಪಕ ಮಹಾದೇವ್ ಮಾತನಾಡುತ್ತ, ನನ್ನ ಗೆಳೆಯ ಹೇಮಂತ್ ಒಮ್ಮೆ ಪ್ರವೀಣ್ ಅವರನ್ನು ನನಗೆ ಪರಿಚಯಿಸಿದರು. ಪ್ರವೀಣ್ ಅವರ ಕಥೆ ನನಗೆ ಇಷ್ಟವಾಯಿತು. ನನಗೆ ನೂರು ಸಿನಿಮಾ ಮಾಡಿದಷ್ಟು ಅನುಭವವನ್ನು ಈ ಚಿತ್ರ ಕಲಿಸಿದೆ ಹಾಗೂ ಚಿತ್ರ ಬಿಡುಗಡೆ ಮಾಡಲು ಎಷ್ಟು ಕಷ್ಟ ಎಂಬುದು ಕೂಡ ಗೊತ್ತಾಗಿದೆ. ಈ ಚಿತ್ರ ಖಂಡಿತ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿಕೊಂಡರು.

ಚಿತ್ರದ ನಾಯಕನಟ ಸೂರ್ಯ ಮಾತನಾಡಿ, ನಾನು ಈ ಚಿತ್ರದಲ್ಲಿ ಅರ್ಧಂಬರ್ದ ಮಾತು ಕೇಳುವ ಕಿವುಡನಾಗಿ ಅಭಿನಯಿಸಿದ್ದೇನೆ. ಸಣ್ಣ ಅಪಘಾತದಲ್ಲಿ ನನ್ನ ಕಿವಿ ಹೋಗಿರುತ್ತದೆ. ಯಾರಾದ್ರೂ ಏನೋ ಹೇಳಿದರೆ ನಾನು ಏನೋ ಅಂದುಕೊಳ್ಳುತ್ತೇನೆ. ಅದು ನೋಡಿವರಿಗೆ ಕಾಮಿಡಿಯಾಗಿರುತ್ತದೆ. ನನಗೆ ಕಾಮಿಡಿ ಬರಲ್ಲ ಅಂತಿದ್ದರು, ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.  ಈ ಚಿತ್ರಕ್ಕೆ ವಿಕ್ರಂ ಸುಬ್ರಮಣ್ಯ ಸಂಗೀತ ನೀಡಿದ್ದಾರೆ.  ಮನು ಬಿ.ಕೆ. ಛಾಯಾಗ್ರಹಣ  ಹಾಗೂ ಗುರುಮೂರ್ತಿ ಹೆಗ್ಗಡೆ ಅವರ ಸಂಕಲನವಿರುವ ಈ ಚಿತ್ರಕ್ಕೆ ಟಗರು ಚಿತ್ರದ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

ಮಹೇಶ್ ಜೆ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಕೆಂಪೇಗೌಡ, ಬೃನಾಲಿ ಶೆಟ್ಟಿ, ಸೂರ್ಯ ಕುಂದಾಪುರ, ಮೋಹನ್ ಜುನೇಜ, ನಟನ ಪ್ರಶಾಂತ್, ರಜನಿಕಾಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಬಹಳಷ್ಟು ನಿರೀಕ್ಷೆಯೊಂದಿಗೆ ಬೆಳ್ಳಿ ಪರದೆ ಮೇಲೆ ಕಟ್ಟುಕಥೆ ಬರುತ್ತಿದೆ.

Facebook Comments

Sri Raghav

Admin