ಒಗ್ಗಟ್ಟು ಪ್ರದರ್ಶನದ ವೇದಿಕೆಯಾದ ರಾಹುಲ್ ಇಫ್ತಾರ್ ಕೂಟ

ಈ ಸುದ್ದಿಯನ್ನು ಶೇರ್ ಮಾಡಿ

Rahul-------0-1

ನವದೆಹಲಿ, ಜೂ.14- ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಇದೇ ಪ್ರಥಮ ಬಾರಿಗೆ ಏರ್ಪಡಿಸಿದ್ದ ಭರ್ಜರಿ ಇಫ್ತಾರ್ ಕೂಟದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು.  ತಾಜ್‍ಮಹಲ್ ಪಂಚತಾರಾ ಹೋಟೆಲ್‍ನಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಕಾಂಗ್ರೆಸ್‍ನ ಅಗ್ರಮಾನ್ಯ ನಾಯಕರು ಹಾಗೂ ಇತರ ಪಕ್ಷಗಳ ಘಟಾನುಘಟಿ ಮುಖಂಡರು ಭಾಗವಹಿಸಿದ್ದರು. ಇದು ಒಂದು ರೀತಿಯಲ್ಲಿ ಒಗ್ಗಟ್ಟು ಮತ್ತು ಬಲ ಪ್ರದರ್ಶನದ ವೇದಿಕೆಯೂ ಆಗಿತ್ತು. ಇಫ್ತಾರ್ ಕೂಟದಲ್ಲಿ ಪ್ರಣವ್ ಮುಖರ್ಜಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಇತ್ತೀಚೆಗೆ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮಗಳೂ ಸೇರಿದಂತೆ ಕಾಂಗ್ರೆಸ್ ಮುಖಂಡರ ತೀವ್ರ ಟೀಕೆಗೆ ಗುರಿಯಾಗಿದ್ದ ಮಾಜಿ ರಾಷ್ಟ್ರಪತಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.

Rahul 04

ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಪ್ರಣವ್ ಭಾಗವಹಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ರಾಹುಲ್ ಆಹ್ವಾನಿಸುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ರಾಹುಲ್ ಮತ್ತು ಮುಖರ್ಜಿ ಒಟ್ಟಿಗೆ ಭೋಜನ ಸೇವಿಸಿದರು. ಅವರಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಮನಸ್ತಾಪ ಇದ್ದಂತೆ ಕಂಡುಬರಲಿಲ್ಲ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ಕಾಂಗ್ರೆಸ್‍ನ ಅಗ್ರನಾಯಕರು ಇಫ್ತಾರ್ ಔತಣದಲ್ಲಿ ಭಾಗವಹಿಸಿದ್ದರು.

Rahul 03

ಕಾಂಗ್ರೆಸ್ ನಾಯಕರಲ್ಲದೇ, ಜೆಡಿಯುನ ಬಂಡಾಯ ನಾಯಕ ಶರದ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಜೆಡಿಎಸ್ ಮುಖಂಡ ಡ್ಯಾನಿಶ್ ಅಲಿ, ತೃಣಮೂಲ ಕಾಂಗ್ರೆಸ್‍ನ ದಿನೇಶ್ ತಿವಾರಿ, ಬಿಎಸ್‍ಪಿಯ ಸತೀಶ್ ಚಂದ್ರ ಮಿಶ್ರಾ, ಎನ್‍ಸಿಪಿಯ ಡಿ.ಪಿ.ತ್ರಿಪಾಠಿ, ಡಿಎಂಕೆಯ ಕನಿಮೊಳಿ, ಆರ್‍ಜೆಡಿಯ ಮನೋಜ್ ಝಾ, ಜೆಎಂಎಂನ ಹೇಮಂತ್ ಸೊರೆನ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ರೂಪಗೊಳ್ಳುತ್ತಿರುವ ಮಹಾಘಟಬಂಧನ್‍ಗೆ ಇದೊಂದು ಪೂರಕ ವೇದಿಕೆಯಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Rahul 02

Facebook Comments

Sri Raghav

Admin