ಹೈಟೆಕ್ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್’ನ್ನು ಲೋಕಾರ್ಪಣೆ ಮಾಡಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ರಾಯ್‍ಪುರ್, ಜೂ.14-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಛತ್ತೀಸ್‍ಗಢದ ನಯಾ ರಾಯ್‍ಪುರ್‍ನಲ್ಲಿ ಅತ್ಯಾಧುನಿಕ ಇಂಟಿಗ್ರೇಟೆಡ್ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.  ಛತ್ತೀಸ್‍ಗಢದ ನೂತನ ರಾಜಧಾನಿಯಾಗಿ ಹೊರಹೊಮ್ಮಲಿರುವ ನಯಾ ರಾಯ್‍ಪುರ್‍ನಲ್ಲಿ(ರಾಯ್‍ಪುರ್ ಈಗಿನ ರಾಜಧಾನಿ) ನಡೆದ ಕಾರ್ಯಕ್ರಮದಲ್ಲಿ ಮೋದಿ ಈ ನಿಯಂತ್ರಣ ಕೇಂದ್ರವನ್ನು ಉದ್ಘಾಟಿಸಿದರು.

ಈ ಕೇಂದ್ರವು ಒಂದೇ ವೇದಿಕೆಯಲ್ಲಿ ನೀರು ಮತ್ತು ವಿದ್ಯುತ್ ಪೂರೈಕೆ, ನೈರ್ಮಲೀಕರಣ, ಸಂಚಾರ ವ್ಯವಸ್ಥೆ, ಸಮಗ್ರ ಕಟ್ಟಡ ನಿರ್ವಹಣೆ, ನಗರ ಸಂಪರ್ಕ ಹಾಗೂ ಇಂಟರ್‍ನೆಟ್ ಮೂಲಸೌಕರ್ಯ(ಡೇಟಾ ಸೆಂಟರ್)-ಇವುಗಳನ್ನು ಆನ್‍ಲೈನ್ ಮೂಲಕ ನಿಯಂತ್ರಣ ಮತ್ತು ನಿರ್ವಹಣೆ ಮಾಡಲಿದೆ. ಅಲ್ಲದೇ ನಯಾ ರಾಯ್‍ಪುರ್ ನಗರದ ವಿವಿಧ ಸೌಲಭ್ಯಗಳ ಉಸ್ತುವಾರಿಯನ್ನೂ ವಹಿಸಲಿದೆ. ಹೈಟೆಕ್ ಇಂಟಿಗ್ರೇಟೆಡ್ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ಜಿಐಎಸ್(ಭೌಗೋಳಿಕ ಮಾಹಿತಿ ವ್ಯವಸ್ಥೆ) ವೇದಿಕೆ ಮೂಲಕ ಕೇಂದ್ರವನ್ನು ನಿರ್ವಹಿಸಲಾಗುತ್ತದೆ.

Facebook Comments

Sri Raghav

Admin