3013ಕ್ಕೆ ರೈಲು ಟಿಕೆಟ್‍ ಬುಕ್, 13,000 ರೂ. ಪರಿಹಾರ ಪಡೆದ ಪ್ರೊಫೆಸರ್..!

ಈ ಸುದ್ದಿಯನ್ನು ಶೇರ್ ಮಾಡಿ

Train-Ticket

ಭಾರತೀಯ ರೈಲ್ವೆ ಅವಾಂತರಕ್ಕೆ ಇದೊಂದು ಸ್ಪಷ್ಟ ಸಾಕ್ಷಿ. ಐದು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಪಡೆದಿದ್ದ 3013ರ ದಿನಾಂಕದ ರೈಲು ಟಿಕೆಟ್‍ನಿಂದ ತಲೆದೋರಿದ ರಾದ್ಧಾಂತಕ್ಕಾಗಿ ಅವರಿಗೆ 13,000 ರೂ.ಗಳ ಪರಿಹಾರ ದೊರೆತಿದೆ. ಉತ್ತರ ಪ್ರದೇಶದ ನಿವೃತ್ತ ಪ್ರೊಫೆಸರ್ ವಿಷ್ಣು ಕಾಂತ್ ಶುಕ್ಲಾ (73) ಅವರಿಗೆ 13,000 ರೂ.ಗಳ ಪರಿಹಾರ ನೀಡುವಂತೆ ಉತ್ತರ ಪ್ರದೇಶದ ಸಹರನ್‍ಪುರ್ ಜಿಲ್ಲೆಯ ಗ್ರಾಹಕರ ನ್ಯಾಯಾಲಯವೊಂದು ಆದೇಶ ನೀಡಿದೆ.

ಏನಿದು ಘಟನೆ ?
ಐದು ವರ್ಷಗಳ ಹಿಂದೆ ಅಂದರೆ 19ನೇ ನವೆಂಬರ್, 2013ರಂದು ಶುಕ್ಲಾ ಅವರನ್ನು ರೈಲಿನ ಟಿಕೆಟ್ ಪರೀಕ್ಷಕ (ಟಿಟಿಇ) ಸಹರನ್‍ಪರ್- ಜಾನ್‍ಪುರ್ ಹಿಮಗಿರ್ ಎಕ್ಸ್‍ಪ್ರೆಸ್ ರೈಲಿನಿಂದ ಹೊರದಬ್ಬಿದ್ದರು. ರೈಲಿನ ಟಿಕೆಟ್ ಮೇಲೆ 2013ರ ಬದಲಿಗೆ 3013 ವರ್ಷ ನಮೂದಾಗಿದ್ದೇ ಇದಕ್ಕೆ ಕಾರಣ. ತಮ್ಮದಲ್ಲದ ತಪ್ಪಿನಿಂದ ತೀವ್ರ ತೊಂದರೆಗೆ ಒಳಗಾದ ಶುಕ್ಲ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ದೀರ್ಘಕಾಲದಿಂದ ಈ ಪ್ರಕರಣದ ವಿಚಾರಣೆ ನಡೆದು ಕೊನೆಗೆ ನಿವೃತ್ತ ಪ್ರೊಫೆಸರ್ ಗೆ ನ್ಯಾಯ ಲಭಿಸಿತು. ಅಲ್ಲದೇ 13,000 ರೂ.ಗಳ ಪರಿಹಾರವೂ ದಕ್ಕಿತು.

Facebook Comments

Sri Raghav

Admin