ಅಂಚೆ ಮೂಲಕ ಲಭ್ಯವಾಗಲಿವೆ ಸಕಾಲ ಪ್ರಮಾಣ ಪತ್ರಗಳು

ಈ ಸುದ್ದಿಯನ್ನು ಶೇರ್ ಮಾಡಿ

Sakala--01
ಬೆಂಗಳೂರು, ಜೂ.14- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಕಾಲ ಸೇವೆಗಳ ಪ್ರಮಾಣ ಪತ್ರವನ್ನು ಸಾಮಾನ್ಯ ಅಂಚೆ, ಸ್ಪೀಡ್ ಪೋಸ್ಟ್ ಹಾಗೂ ನೋಂದಣಿ ಅಂಚೆ ಮೂಲಕ ನಾಗರಿಕರಿಗೆ ತಲುಪಿಸಲು ಆದೇಶಿಸಲಾಗಿದೆ. ವಿವಿಧ ಇಲಾಖೆಗಳು ಸಕಾಲ ಸೇವೆಗಳ ಅಧಿನಿಯಮದಡಿ ನಾಗರಿಕರಿಗೆ ನೀಡಲಾಗುತ್ತಿರುವ ವಿವಿಧ ಇಲಾಖೆಗಳ ಸೇವೆಗಳ ಪ್ರಮಾಣ ಪತ್ರವನ್ನು ( ಜನನ, ಮರಣ, ಆದಾಯ, ಜಾತಿ )ಅಂಚೆ ಮೂಲಕ ನಾಗರಿಕರಿಗೆ ತಲುಪಿಸಲು ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.

Facebook Comments

Sri Raghav

Admin