ಟಿವಿ ಮಾರುಕಟ್ಟೆ ವಿಸ್ತರಣೆಗೆ ಸ್ಯಾಮ್‍ಸಂಗ್’ನಿಂದ ಬೃಹತ್ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Samsung--01

ಚೆನ್ನೈ , ಜೂ.14- ಗ್ರಾಹಕರ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಟಿತ ಸ್ಯಾಮ್‍ಸಂಗ್ ಸಂಸ್ಥೆ ಭಾರತದಲ್ಲಿ ಟಿವಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ಸತತ ಕಳೆದ 13 ವರ್ಷ ಗಳಿಂದ ಅತ್ಯಾಧುನಿಕ ಟೆಲಿವಿಷನ್ ತಂತ್ರಜ್ಞಾನದಲ್ಲಿ ಅಗ್ರಮಾನ್ಯವಾಗಿ ರುವ ಈ ಸಂಸ್ಥೆ ಇದೀಗ ಕ್ಯೂ ಎಲ್‍ಇಡಿ , ಯುಎಚ್‍ಡಿ ಸೇರಿದಂತೆ ಮತ್ತಷ್ಟು ನವೀನ ತಂತ್ರಜ್ಞಾನದ ಟೆಲಿವಿಷನ್‍ಗಳನ್ನು ಇಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಚೆನ್ನೈನಲ್ಲಿಂದು ನಡೆದ ಹೊಸ ಮಾದರಿಯ ಕ್ಯೂ ಎಲ್‍ಇಡಿ ಟೆಲಿವಿಷನ್ ಅನ್ನು ಇಂದು ಖ್ಯಾತ ಚಿತ್ರ ನಟಿ ಹನ್ಸಿಕಾ ಮೋಟ್ವಾನಿ ಅನಾವರಣಗೊಳಿಸಿದರು. ಸ್ಯಾಮ್‍ಸಂಗ್ ಇಂಡಿಯಾದ ಗ್ರಾಹಕರ ಎಲೆಕ್ಟ್ರಾನಿಕ್ ವಹಿವಾಟು ವಿಭಾಗದ ಜನರಲ್ ಮ್ಯಾನೇಜರ್ ಪಿಯೂಷ್ ಕರ್ಣ ಈ ಸಂದರ್ಭದಲ್ಲಿ ಸಂಸ್ಥೆಯ ಯೋಜನೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಗ್ರಾಹಕರಿಗೆ ಅಚ್ಚುಮೆಚ್ಚಾದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲು ಉತ್ಸುಕವಾಗಿದ್ದು , ಈಗ ಟಿವಿ ಕ್ಷೇತ್ರದಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಮಾರುಕಟ್ಟೆ ಕ್ಷೇತ್ರವನ್ನು ಮತ್ತಷ್ಟು ವಿಸ್ತಾರಗೊಳಿಸಲು ಯೋಜನೆ ರೂಪುಗೊಂಡಿದೆ ಎಂದು ಅವರು ತಿಳಿಸಿದರು. ಪ್ರಸಕ್ತ ವರ್ಷದಲ್ಲಿ ಮತ್ತಷ್ಟು ಆಕರ್ಷಕ ಉತ್ಪನ್ನಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin