ಉತ್ತರಖಂಡದ ಉತ್ತರಕಾಶಿಯಲ್ಲಿ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Uttarkashi--01

ಉತ್ತರಕಾಶಿ, ಜೂ.14-ಉತ್ತರಖಂಡದ ಉತ್ತರಕಾಶಿಯಲ್ಲಿ ಇಂದು ನಸುಕಿನಲ್ಲಿ ಸಾಧಾರಣ ತೀವ್ರತೆಯ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 4.0ರಷ್ಟಿತ್ತು. ಉತ್ತರಕಾಶಿಯಲ್ಲಿ ಇಂದು ನಸುಕು 12.08ರಲ್ಲಿ ಸಾಧಾರಣ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭಾರತ ಹವಾಮಾನ ಇಲಾಖೆ ಹೇಳಿದೆ. ಭೂಕಂಪದಲ್ಲಿ ಯಾವುದೇ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ವರದಿಯಾಗಿಲ್ಲ.

ಭೂಮಿಯೊಳಗೆ 10 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದ್ದು. ಉತ್ತರಕ್ಕೆ 30.8 ಅಕ್ಷಾಂಶ ಹಾಗೂ ಪೂರ್ವಕ್ಕೆ 78.2 ರೇಖಾಂಶದಲ್ಲಿ ಇದು ಉಂಟಾಗಿದೆ ಎಂದು ಇಲಾಖೆ ತಿಳಿಸಿದೆ. 1991ರಲ್ಲಿ ಉತ್ತರಕಾಶಿಯಲ್ಲಿ 6.8ರಷ್ಟು ತೀವ್ರತೆಯ ಭೂಕಂಪದಿಂದ 760ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡಿದ್ದರು.

Facebook Comments

Sri Raghav

Admin