ಅಟ್ಲಾಂಟಿಕ್ ಸಾಗರದ ವೋಲ್ವೊ ಓಷಿಯನ್ ರೇಸ್‍ನಲ್ಲಿ ಟೀಮ್ ಬ್ರುನೆಲ್ ದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

DS-1
ರೋಚಕ ನೌಕಾಯಾನಕ್ಕೆ ಸಾಹಸ ಕ್ರೀಡೆಗಳಲ್ಲಿ ವಿಶೇಷ ಸ್ಥಾನವಿದೆ. ಈ ಜಲಕ್ರೀಡೆಯಲ್ಲೂ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ನೆದರ್‍ಲೆಂಡ್ಸ್ ನ ಟೀಮ್ ಬ್ರುನೆಲ್ ಸಾಹಸಿಗರು ವೋಲ್ವೋ ಓಷಿಯನ್ ರೇಸ್‍ನಲ್ಲಿ ಹೊಸ ವಿಕ್ರಮ ಸಾಧಿಸಿದರು.  ಅಮೆರಿಕದ ನ್ಯೂಪೋರ್ಟ್‍ನಿಂದ ಯುನೈಟೆಡ್ ಕಿಂಗ್‍ಡಂನ ಕಾರ್ಡಿಫ್‍ವರೆಗೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ನಡೆದ ವೋಲ್ವೋ ಓಷಿಯನ್ ರೇಸ್‍ನ ಐದನೇ ದಿನದ ಒಂಭತ್ತನೇ ಹಂತದ ನೌಕಾ ಸ್ಪರ್ಧೆ ಅತ್ಯಂತ ರೋಚಕವಾಗಿತ್ತು.  ಡಚ್‍ನ ಟೀಮ್ ಬ್ರುನೆಲ್ ತಂಡ 24 ಗಂಟೆಗಳಲ್ಲಿ 550 ಪಾಯಿಂಟ್ 8 ನಾಟಿಕಲ್ ಮೈಲಿಯನ್ನು ಕ್ರಮಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿತು. ಇದರೊಂದಿಗೆ ಕಳೆದ ವರ್ಷದ ರೇಸ್‍ನಲ್ಲಿ ಅಬುಧಾಬಿ ರೇಸಿಂಗ್ ತಂಡದಿಂದ ನಿರ್ಮಿಸಲಾಗಿದ್ದ ಹಿಂದಿನ ಬಹುದೂರದ ದಾಖಲೆ ಅಳಿಸಿ ಹೋಯಿತು.

DS

Facebook Comments

Sri Raghav

Admin