ರಂಜಾನ್ ಪ್ರಯುಕ್ತ ಬೆಂಗಳೂರಿನ ಹಲವೆಡೆ ಸಂಚಾರ ಮಾರ್ಪಾಡು, ಎಲ್ಲೆಲ್ಲಿ ಎಂಬ ಡೀಟೇಲ್ಸ್ ಇಲ್ಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

Bangalore-Traffic

ಬೆಂಗಳೂರು, ಜೂ. 15-ರಂಜಾನ್ ಹಬ್ಬದ ಪ್ರಯುಕ್ತ ನಾಳೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ನಡೆಯುವ ಪ್ರಾರ್ಥನಾ ಕೂಟಗಳಿಗೆ ಸೂಕ್ತ ಸಂಚಾರ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಿ ವಾಹನಗಳ ಸಂಚಾರವನ್ನು ಮಾರ್ಪಾಡು ಮಾಡಲಾಗಿದೆ. ಪ್ರಾರ್ಥನಾಕೂಟಗಳು ಮುಕ್ತಾಯದವರೆಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ಗಂಟೆವರೆಗೆ ಈ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತದೆ.

ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ:
ನಾಗಾವಾರ ಮುಖ್ಯರಸ್ತೆಯಲ್ಲಿ ಪ್ರಾರ್ಥನಾ ಕೂಟ ನಡೆಯುವುದರಿಂದ ನಾಗಾವಾರದಿಂದ ನರೇಂದ್ರ ಟೆಂಟ್ ಪೆರಿಯಾರ್ ನಗರದ ಕಡೆಗೆ ಬರುವ ವಾಹನಗಳನ್ನು ಹೊರ ರಿಂಗ್ ರಸ್ತೆಯಲ್ಲಿಯೇ ನಿರ್ಬಂಧಿಸಿ ಹೆಣ್ಣೂರು ಜಂಕ್ಷನ್ ಕಡೆಗೆ ಮಾರ್ಗ ಬದಲಾವಣೆ ಮಾಡಿ ಲಿಂಗರಾಜಪುರ ಆಯಿಲ್ ಮಿಲ್ ಮುಖಾಂತರ ಮುಂದೆ ಸಾಗಬಹುದಾಗಿರುತ್ತದೆ.  ಗೋವಿಂದಪುರದಿಂದ ನರೇಂದ್ರ ಟೆಂಟ್ ಕಡೆಗೆ ಬರುವ ವಾಹನಗಳನ್ನು ನರೇಂದ್ರ ಟೆಂಟ್ ಬಳಿ ಸಂಚಾರವನ್ನು ನಿರ್ಬಂಧಿಸಿ ಎಡ ತಿರುವು ಪಡೆದುಕೊಂಡು ಬಿಡಿಎ ಕಾಂಪ್ಲೆಕ್ಸ್, ಸಿದ್ದಪ್ಪರೆಡ್ಡಿ ಸರ್ಕಲ್ ಸೇರಿ ಅಲ್ಲಿಂದ ಲಿಂಗರಾಜಪುರ ಮುಖಾಂತರ ಮುಂದೆ ಸಾಗಬಹುದಾಗಿರುತ್ತದೆ.

ಟ್ಯಾನರಿರಸ್ತೆ ಈದ್ಗಾ ಮೈದಾನ:
ನೇತಾಜಿ ರಸ್ತೆಯಿಂದ ಟ್ಯಾನರಿ ರಸ್ತೆಯ ಕಡೆಗೆ ಸಾಗುವ ವಾಹನಗಳನ್ನು ಪಾಟರಿ ಸರ್ಕಲ್ ಬಳಿ ನಿರ್ಬಂಧಿಸಿ ಎಂ.ಎಂ.ರಸ್ತೆಯ ಕಡೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಮಾಸ್ಕ್ ರಸ್ತೆಯ ಮುಖಾಂತರ ಡೇವಿಸ್ ರಸ್ತೆ, ಲಿಂಗರಾಜಪುರ, ಹೆಣ್ಣೂರು ಮುಖ್ಯರಸ್ತೆ ಸೇರಬಹುದಾಗಿರುತ್ತದೆ.

ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ:
ಹೆನ್ಸ್ ರಸ್ತೆಯಿಂದ ಹಜ್ ಕ್ಯಾಂಪ್ ಕಡೆಗೆ ಹೋಗುವ ವಾಹನಗಳನ್ನು ನಿರ್ಬಂಧಿಹೈನ್ಸ್ ರಸ್ತೆಯಲ್ಲಿ ಸುಲ್ತಾನ್ ಜಿ ಗುಂಟಾ ರಸ್ತೆಯ ಕಡೆಗೆ ಮಾರ್ಗ ಬದಲಾವಣೆ ಮಾಡಿ ಕಳುಹಿಸಿಕೊಡಲಾಗುವುದು. ಜಯಮಹಲ್ ಕಡೆಯಿಂದ ಹಜ್ ಕ್ಯಾಂಪ್ ಕಡೆಗೆ ಬರುವ ವಾಹನಗಳನ್ನು ಕಂಟೋನ್‍ಮೆಂಟ್ ಅಂಡರ್ ಬ್ರಿಡ್ಜ್ ಬಳಿ ಮಾರ್ಗ ಬದಲಾವಣೆ ಮಾಡಿ ಕಂಟೋನ್‍ಮೆಂಟ್ ರೈಲ್ವೆ ಸ್ಟೇಷನ್ ಮೂಲಕ ಕಳುಹಿಸಿಕೊಡಲಾಗುವುದು. ನಂದಿದುರ್ಗಾ ರಸ್ತೆಯಲ್ಲಿ ಹಜ್ ಕ್ಯಾಂಪ್ ಕಡೆಗೆ ಬರುವ ವಾಹನಗಳನ್ನು ಬೆನ್ಸ್‍ನ್ ಟೌನ್ ಬಳಿಯೇ ನಿರ್ಬಂಧಿಸಿ ಬೆನ್ಸ್‍ನ್ ಟೌನ್ ಮುಖಾಂತರ ರಸ್ತೆ ಸೇರಿ ಮುಂದೆ ಸಾಗಬಹುದಾಗಿರುತ್ತದೆ.

Facebook Comments

Sri Raghav

Admin