ರುದ್ರಾ ಲೈಫ್-ಸಿಸಿಐಸಿನಿಂದ ರುದ್ರಾಕ್ಷಿಗಳ ಪ್ರದರ್ಶನ – ಮಾರಾಟ

ಈ ಸುದ್ದಿಯನ್ನು ಶೇರ್ ಮಾಡಿ

rudrakshi
ಬೆಂಗಳೂರು, ಜೂ.15- ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಮತ್ತು ಐಎಸ್‍ಒ ಮಾನ್ಯತೆ ಪಡೆದಿರುವ ರುದ್ರಾಲೈಫ್ ಸಂಸ್ಥೆ ಜೊತೆಯಾಗಿ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟವನ್ನು ಇಂದಿನಿಂದ ಜೂ.24ರವರೆಗೆ ಸಿಸಿಐಸಿನ ಬೆಂಗಳೂರಿನ ಎರಡು ಮಳಿಗೆಗಳಲ್ಲಿ ಆಯೋಜಿಸಲಾಗಿದೆ.  ಎಂಜಿ ರಸ್ತೆಯ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ ಮತ್ತು ಎಚ್.ಎಸ್.ಆರ್.ಲೇಔಟ್‍ನ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂನಲ್ಲಿ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.

ಪ್ರದರ್ಶನದ ವಿಶೇಷವೆಂದರೆ ರುದ್ರಾಲೈಫ್‍ನ ಪರಿಣತರಿಂದ ರುದ್ರಾಕ್ಷಿಗಳನ್ನು ಕುರಿತಂತೆ ಉಚಿತ ಸಲಹೆ, ಶಿಫಾರಸು ನೀಡಲಾಗುತ್ತದೆ. ತರಬೇತಿ ಹೊಂದಿರುವ ಕರಕುಶಲ ಕರ್ಮಿಗಳಿಂದ ಸ್ಥಳದಲ್ಲೇ ಮಾಲೆಗಳನ್ನು ಉಚಿತವಾಗಿ ತಯಾರಿಸಿ ನೀಡಲಾಗುತ್ತದೆ.  ಜೊತೆಗೆ ನಿಮ್ಮ ರುದ್ರಾಕ್ಷಿಗಳನ್ನು ಪರಿಣತರು ಪರೀಕ್ಷಿಸಿ ಕೊಡಲಿದ್ದಾರೆ. 1ರಿಂದ 21 ಮುಖಿವರೆಗಿನ ರುದ್ರಾಕ್ಷಿಗಳು ಇಲ್ಲಿ ಲಭ್ಯವಿದ್ದು, ವೈದಿಕರಿಂದ ಉಚಿತವಾಗಿ ಅಭಿಷೇಕವನ್ನೂ ನಡೆಸಿಕೊಡಲಾಗುತ್ತದೆ.  ಹೆಚ್ಚಿನ ಮಾಹಿತಿಗೆ ದೂ.ಸಂ 09320077018 ಅಥವಾ 09322791218 ಸಂಪರ್ಕಿಸಬಹುದಾಗಿದೆ.

Facebook Comments

Sri Raghav

Admin