ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ವೇದಗಳನ್ನು, ಪುರಾಣಗಳನ್ನು, ಶಾಸ್ತ್ರಗಳನ್ನು ಓದುವುದರಿಂದ ಏನು? ಯಾವ ಕರ್ಮಗಳನ್ನು ಮಾಡುವುದರಿಂದ ಸ್ವರ್ಗದ ಹಳ್ಳಿಯ ಒಂದು ಗುಡಿಸಲಿನ ವಾಸ ಲಭಿಸುತ್ತದೆಯೋ ಅವುಗಳಿಂದೇನು ಪ್ರಯೋಜನ? ಯಾವುದು ಸಂಸಾರ ಬಂಧನದ ದುಃಖ ನಿರ್ಮೂಲನ ಮಾಡಿ ಆತ್ಮಾನಂದವನ್ನುಂಟು ಮಾಡುವುದೋ ಅದನ್ನೇ ಅವಲಂಬಿಸಬೇಕು. ಉಳಿದವುಗಳು ವ್ಯಾಪಾರ ಮನೋಭಾವದ ವೃತ್ತಿಗಳು -ವೈರಾಗ್ಯ ಶತಕ

Rashi

ಪಂಚಾಂಗ : ಶುಕ್ರವಾರ 15.06.2018

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ಬೆ.7.16 / ಚಂದ್ರ ಅಸ್ತ ರಾ.8.28
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಶುಕ್ಷ ಪಕ್ಷ / ತಿಥಿ : ದ್ವಿತೀಯಾ (ಸಾ.6.10)
ನಕ್ಷತ್ರ: ಆರಿದ್ರ (ಬೆ.11.21) / ಯೋಗ: ವೃದ್ಧಿ (ರಾ.9.24)
ಕರಣ: ಬಾಲವ-ಕೌಲವ-ತೈತಿಲ (ಬೆ.7.55-ಸಾ.6.10-ರಾ.4.26)
ಮಳೆ ನಕ್ಷತ್ರ: ಮೃಗಶಿರಾ / ಮಾಸ: ಮಿಥುನ ಮಾಸ / ತೇದಿ: 1

ಇಂದಿನ ವಿಶೇಷ:

ರಾಶಿ ಭವಿಷ್ಯ  :  

ಮೇಷ: ಜನರ ಹಸ್ತಕ್ಷೇಪ ಸಂಗಾತಿ ಜೊತೆಗಿನ ನಿಮ್ಮ ಸಂಬಂಧಕ್ಕೆ ಧಕ್ಕೆ ತರಲಿದೆ.
ವೃಷಭ: ಕೆಲಸಕ್ಕೆ ಸಂಬಂಧಿಸಿದಂತೆ ಈ ದಿನ ಒಳ್ಳೆಯದಾಗಲಿದೆ.
ಮಿಥುನ: ಒಳ್ಳೆಯ ಕೆಲಸದಿಂದ ನಿಮ್ಮ ಮೇಲೆ ಪ್ರೀತಿ ಅರಳಲಿದೆ
ಕರ್ಕ: ಭಾವನಾತ್ಮಕ ಮನಸ್ಥಿತಿಯಿಂದ ಹೊರಬರಲು ಹಿಂದಿನದ್ದೆಲ್ಲವನ್ನೂ ಮರೆತುಬಿಡುವುದು ಒಳಿತು.
ಸಿಂಹ: ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ.
ಕನ್ಯಾ: ಸರಿಯಾದ ಸಂಭಾಷಣೆ ಮತ್ತು ಸಹಕಾರ, ಸಂಗಾತಿ ಜೊತೆಗಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ.
ತುಲಾ: ನೀವು ಪ್ರಣಯಭರಿತ ಪ್ರವಾಸಕ್ಕೆ ಹೋಗುವ ದಿನ.
ವೃಶ್ಚಿಕ: ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸುವುದು ಒಳಿತು.
ಧನುರ್: ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಲಿದ್ದೀರಿ.
ಮಕರ: ಸಹೋದರನ ನಡೆಯಿಂದ ದುಃಖ
ಕುಂಭ: ಚಿಂತೆಯಿಂದ ಉದ್ವೇಗಕ್ಕೊಳಗಾಗುವಿರಿ
ಮೀನ: ಅನ್ಯರ ಮಾತುಗಳಿಗೆ ಪ್ರತಿಕ್ರಿಯಿಸದಿರುವುದು ಒಳಿತು.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin