ಕೆಆರ್ ಎಸ್‍ ಜಲಾಶಯದಲ್ಲಿ 94.50 ಅಡಿ ನೀರು ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

KRS-Dam--01
ಮಂಡ್ಯ ,ಜೂ.15- ಕೊಡಗಿನಲ್ಲಿ ಸತತವಾಗಿ ಮಳೆಯಾಗುತ್ತಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ವಿಶ್ವಪ್ರಸಿದ್ದ ಕೃಷ್ಣರಾಜ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು ಇಂದು 94.50 ಅಡಿ ನೀರಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 67.60 ಅಡಿ ನೀರಿತ್ತು. ಕೆ ಆರ್‍ಎಸ್‍ಗೆ 28096 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 424 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 124.84 ಅಡಿಗಳು.

Facebook Comments

Sri Raghav

Admin