3 ಲಕ್ಷ ಸಿಎಸ್‍ಸಿಗಳಿಂದ ಉದ್ಯೋಗ ಸೃಷ್ಟಿ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-CSC

ನವದೆಹಲಿ, ಜೂ. 15-ಮೂರು ಲಕ್ಷ ಸಾಮಾನ್ಯ ಕೇಂದ್ರಗಳ (ಸಿಎಸ್‍ಸಿ) ಜಾಲದಿಂದಾಗಿ ಉದ್ಯೋಗ ಮತ್ತು ಉದ್ಯಮಶೀಲತೆ ಅವಕಾಶಗಳು ಸೃಷ್ಟಿಯಾಗಿದ್ದು, ಜನರನ್ನು ಸಬಲೀಕರಣಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಡಿ ಜಿಟಲ್ ಇಂಡಿಯಾದ ವಿವಿಧ ಉಪಕ್ರಮಗಳ ಫಲಾನುಭವಿಗಳೊಂದಿಗೆ ಇಂದು ಸಂವಾದ ನಡೆಸಿದ ಮೋದಿ, ಜನರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಂದಿ ತಂತ್ರಜ್ಞಾನ ಸೌಲಭ್ಯಗಳ ಪ್ರಯೋಜನಗಳನ್ನು ಪಡೆಯುವ ಉದ್ದೇಶದೊಂದಿಗೆ ಇದನ್ನು ಜಾರಿಗೊಳಿಸಲಾಗಿದೆ ಎಂದರು.

ಡಿಜಿಟಲ್ ಸೇವೆಗಳನ್ನು ಹೊಂದುವಂತಾಲು ಮೂರು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಜಾಲವನ್ನು ಅನುಷ್ಠಾನಗೊಳಿಸಲಾಗಿದೆ. ಇದು ಉದ್ಯೋಗ ಮತ್ತು ಉದ್ಯಮ ಅವಕಾಶಗಳನ್ನು ಹೆಚ್ಚಿಸಿದೆ. ಆ ಮೂಲಕ ಜನರನ್ನು ಸಬಲೀಕರಣಗೊಳಿಸಿದೆ ಎಂದು ಪ್ರಧಾನಿ ಹೇಳಿದರು. ಆನ್‍ಲೈನ್ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡಲು ಹಾಗೂ ಬಿಲ್‍ಗಳು ಪಾವತಿಸಲು ತಂತ್ರಜ್ಞಾನ ನೆರವಾಗಿದೆ. ಇದರಿಂದ ಜನರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನಗಳು ಲಭಿಸಿವೆ. ತಂತ್ರಜ್ಞಾನದ ಪ್ರಯೋಜನಗಳು ಆಯ್ಕೆ ಮಾಡಿದ ಕೆಲವರಿಗೆ ಮಾತ್ರ ನಿರ್ಬಂಧವಾಗಬಾರದು ಅದು ಸಮಾಜದ ಎಲ್ಲ ವರ್ಗಗಳಿಗೂ ತಲುಪಬೇಕು. ಇದೇ ಉದ್ದೇಶಕ್ಕಾಗಿ ನಾವು ಸಿಎಸ್‍ಸಿಗಳ ಜಾಲವನ್ನು ಬಲಗೊಳಿಸಿದ್ದೇವೆ. ಈ ಉಪಕ್ರಮದಿಂದಾಗಿ ಗ್ರಾಮ ಮಟ್ಟದ ಉದ್ಯಮಿಗಳ ಸಮೂಹ ಸೃಷ್ಟಿಸಲು ಸಹಕಾರಿಯಾಗಿದೆ. ಎಂದು ಮೋದಿ ಹೇಳಿದೆ.

Facebook Comments

Sri Raghav

Admin