3450 ಸರ್ಕಾರಿ ಶಾಲೆಗಳ ವಿಲೀನಕ್ಕೆ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

School

ಬೆಂಗಳೂರು, ಜೂ.15- ಗ್ರಾಮೀಣ ಪ್ರದೇಶದಲ್ಲಿ ಏಕ ಶಿಕ್ಷಕರಿದ್ದಾರೆ ಎಂಬ ಕಾರಣ ಮುಂದಿಟ್ಟು, 3450 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ನವ ಜಾಗೃತಿ ವೇದಿಕೆಯ ಅಧ್ಯಕ್ಷ ಅನಂತರಾಯಪ್ಪ ವಿರೋಧಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೌಲಭ್ಯದ ಕೊರತೆಯ ಕಾರಣದಿಂದ ಮಕ್ಕಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರಿಸಲಾಗುತ್ತಿಯೇ ಹೊರತು ಯಾವುದೆ ಶಾಲೆಗಳನ್ನು ಮುಚ್ಚುವುದಿಲ್ಲ, ಎಂದು ಸರ್ಕಾರ ಹೇಳುತ್ತಿರುವುದು ಸುಳ್ಳು, ಮಕ್ಕಳನ್ನು ಬೇರೆ-ಬೇರೆ ಶಾಲೆಗಳಿಗೆ ಸ್ಥಳಾಂತರಿಸಿದ ಮೇಲೆ ಎಲ್ಲಾ ಶಾಲೆಗಳು ಸರ್ಕಾರಿ ದಾಖಲೆಗಳಲ್ಲಿ ಅಸ್ತಿತ್ವದಲ್ಲಿದ್ದರು ಕೂಡ ವಾಸ್ತವದಲ್ಲಿ ತಾನಾಗಿಯೇ ಮುಚ್ಚಿ ಹೋಗುತ್ತದೆ. ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲದಂತಾಗುತ್ತದೆ ಎಂದು ಹೇಳಿದರು.

ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸಬೇಕಾದದ್ದು ಹಾಗೂ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ, ಸರ್ಕಾರ ಬಡವರ ಮಕ್ಕಳ ಶಿಕ್ಷಣ ಕಿತ್ತುಕೊಳ್ಳುತ್ತಿರುವುದು ಖಂಡನೀಯ ಈ ವರ್ಷ ಮಕ್ಕಳನ್ನು ಬೇರೆ ಶಾಲೆಗೆ ಸ್ಥಳಾಂತರಿಸಬಹುದು ಆದರೆ ಮುಂಬರುವ ವರ್ಷಗಳಲ್ಲಿ 3450 ಹಳ್ಳಿಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪುಟ್ಟ ಮಕ್ಕಳು ಶಿಕ್ಷಣ ಪಡೆಯಲು ಪ್ರತಿ ದಿನ 3ರಿಂದ 4ಕಿಮಿ ಗಳಷ್ಟು ದೂರ ಹೋಗಬೇಕಾಗುತ್ತದೆ ಆ ಮಕ್ಕಳನ್ನು ಕರೆದುಕೊಂಡು ಹೋಗುವಷ್ಟು ಪೋಷಕರಿಗೆ ಸಮಯವಿಲ್ಲ ಅದ್ದರಿಂದ ಪರಿಶಿಷ್ಟ ಜಾತಿ-ಪಂಗಡ ಹಾಗೂ ಕಡು ಬಡವರ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ತಪ್ಪಿಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಪ್ರತಿ ಮಗುವಿಗೆ ತಿಂಗಳಿಗೆ 700 ರೂ ನಂತೆ ಪ್ರಯಾಣ ಖರ್ಚನ್ನು ಒದಗಿಸಿ ವಾಹನ ವ್ಯವಸ್ಥೆ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ.ಒಂದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ತರಗತಿಗೆ 10ಮಕ್ಕಳಂತೆ ಒಂದರಿಂದ ನಾಲ್ಕನೆ ತರಗತಿಯವರೆಗೆ 40 ಮಕ್ಕಳಿದ್ದರೆ ಅವರನ್ನು ಶಾಲೆಗೆ ಕರೆದೊಯ್ಯಲು ವಾಹನ ವ್ಯವಸ್ಥೆಗಾಗಿ 28ಸಾವಿರ ರೂಗಳನ್ನು (700/40) ಸರ್ಕಾರ ಖರ್ಚು ಮಾಡಲು ತಯಾರಾಗಿದೆ.ಇಷ್ಟು ಹಣದಿಂದ 3 ಜನ ಶಿಕ್ಷಕರನ್ನು ಕಾಂಟ್ರ್ಯಾಕ್ಟ್ ಆಧಾರದಲ್ಲಿ ನೇಮಿಸಿಕೊಳ್ಳಬಹುದು ಆಗ ಶಿಕ್ಷಕರ ಕೊರತೆ ಇಲ್ಲದಂತಾಗುತ್ತದೆ ಎಂದು ಅನಂತರಾಯಪ್ಪ ತಿಳಿಸಿದರು. ಆದ್ದರಿಂದ ಸರ್ಕಾರಿ ಶಾಲೆಗೆ ಎಲ್ಲಾ ರೀತಿಯ ಸೌಲಭ್ಯ ನೀಡಿ ಹೆಚ್ಚಿನ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳ ಸ್ಥಳಾಂತರಿಸುವ ಯೋಜನೆಯನ್ನು ಕೈಬಿಡಬೇಕೆಂದು ಅವರು ಮನವಿ ಮಾಡಿದರು.

Facebook Comments

Sri Raghav

Admin