ಸಂಪಾದಕ ಬುಖಾರಿ ಹತ್ಯೆಯಿಂದ ಧೃತಿಗೆಡದ ರೈಸಿಂಗ್ ಕಾಶ್ಮೀರ್

ಈ ಸುದ್ದಿಯನ್ನು ಶೇರ್ ಮಾಡಿ

Rising-Kashmir--014

ಶ್ರೀನಗರ, ಜೂ.15-ತನ್ನ ಮುಖ್ಯ ಸಂಪಾದಕ ಶುಜಾತ್ ಬುಖಾರಿಯನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದು ಹಾಕಿದರೂ ಧೃತಿಗೆಡದ ರೈಸಿಂಗ್ ಕಾಶ್ಮೀರ್ ಆಂಗ್ಲದೈನಿಕ ಇಂದು ದೈನಂದಿನ ಆವೃತಿಯನ್ನು ಮುದ್ರಿಸಿದೆ. ಅಲ್ಲದೇ ಮುಖಪುಟದಲ್ಲಿ ಕಪ್ಪು ಹಿನ್ನೆಲೆ ಇರುವ ಬುಖಾರಿ ಅವರ ಭಾವಚಿತ್ರವನ್ನು ಪ್ರಕಟಿಸಿ ಕೃತ್ಯವನ್ನು ಖಂಡಿಸಿದೆ.

ಶ್ರೀನಗರದ ಲಾಲ್‍ಚೌಕಿಯ ಪ್ರೆಸ್ ಎನ್‍ಕ್ಲೇವ್‍ನ ರೈಸಿಂಗ್ ಕಾಶ್ಮೀರ್ ಪತ್ರಿಕೆ ಹೊರಗೆ ನಿನ್ನೆ ಸಂಜೆ ಇಫ್ತಾರ್ ಕೂಟಕ್ಕೆ ಮುನ್ನ ಅಪರಿಚಿತ ಬಂದೂಕುದಾರಿಗಳು, ಬುಖಾರಿ ಮತ್ತು ಅವರು ಇಬ್ಬರು ಖಾಸಗಿ ಭದ್ರತಾ ಅಧಿಕಾರಿಗಳನ್ನು(ಪಿಎಸ್‍ಒ) ಗುಂಡಿಟ್ಟು ಕೊಂದು ಪರಾರಿಯಾದರು. ತನ್ನ ಮುಖ್ಯ ಸಂಪಾದಕನ ಕಗ್ಗೊಲೆಯಿಂದ ವಿಚಲಿತವಾಗದ ಪತ್ರಿಕೆಯು ಪೂರ್ತಿ ಪುಟ ಬುಖಾರಿ ಅವರ ಫೋಟೊ ಪ್ರಕಟಿಸಿದೆ. ಅಲ್ಲದೇ ಇಂಥ ಕೃತ್ಯಗಳಿಗೆ ಪತ್ರಿಕೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿ ಮುದ್ರಣ ಮಾಡಿದೆ.
ಕ್ರೀರಿಯಲ್ಲಿ ಅಂತ್ಯಕ್ರಿಯೆ: ಹಂತಕರಿಂದ ಹತರಾದ ಬುಖಾರಿ ಅವರ ಅಂತ್ಯಕ್ರಿಯೆ ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ತಮ್ಮ ಪೂರ್ವಜರ ಗ್ರಾಮ ಕ್ರೀರಿಯಲ್ಲಿ ಶೋಕತಪ್ತ ಸಹಸ್ರಾರು ಜನರ ಸಮ್ಮುಖದಲ್ಲಿ ನೆರವೇರಿತು. ಇದಕ್ಕೂ ಮುನ್ನ ನಡೆದ ಅಂತಿಮ ಯಾತ್ರೆಯಲ್ಲಿ ಕುಟುಂಬದ ಸದಸ್ಯರು, ಬಂಧು-ಮಿತ್ರರು, ಹಿತೈಷಿಗಳೊಂದಿಗೆ ಸಾವಿರಾರು ಮಂದಿ ಪಾಲ್ಗೊಂಡರು.

Facebook Comments

Sri Raghav

Admin