ಸ್ಕೂಲ್ ವ್ಯಾನ್‍ಗೆ ಬೆಂಕಿ : ಸಾವಿನ ದವಡೆಯಿಂದ ಪಾರಾದ ಮಕ್ಕಳು

ಈ ಸುದ್ದಿಯನ್ನು ಶೇರ್ ಮಾಡಿ

School-Van--01

ತುಮಕೂರು, ಜೂ.15- ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮ್ನಿ ವ್ಯಾನ್ ರಸ್ತೆ ಮಧ್ಯದಲ್ಲೇ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಉರಿದಿದ್ದು, ಸಾರ್ವಜನಿಕರ ಸಮಯಪ್ರಜ್ಞೆಯಿಂದ 14 ಮಕ್ಕಳು ಸಾವಿನ ದವಡೆಯಿಂದ ಪಾರಾಗಿದ್ದಾರೆ. ತಿಪಟೂರಿನ ಎಸ್‍ಎಸ್‍ಜಿ ಇಂಟರ್‍ನ್ಯಾಷನಲ್ ಶಾಲೆ, ಸೆಂಟ್ ಮೇರಿಸ್ ಶಾಲೆಯ ಎಲ್‍ಕೆಜಿ, ಯುಕೆಜಿ ಪುಟ್ಟ ಕಂದಮ್ಮಗಳನ್ನು ಶಾಲೆ ಬಿಟ್ಟ ನಂತರ ಮನೆಗಳಿಗೆ ಕರೆದೊಯ್ಯುತ್ತಿದ್ದ ಓಮ್ನಿ ವ್ಯಾನ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ವ್ಯಾನ್ ಹಿಂದೆ ಬೈಕ್‍ನಲ್ಲಿ ಬರುತ್ತಿದ್ದ ಸವಾರರು ಗಮನಿಸಿ ವ್ಯಾನ್ ಅಡ್ಡಗಟ್ಟಿ ನಿಲ್ಲಿಸಿ ತಕ್ಷಣ ಎಲ್ಲ ಮಕ್ಕಳನ್ನು ಕೆಳಗಿಳಿಸಿದ ಕ್ಷಣಾರ್ಧದಲ್ಲೇ ನೋಡು ನೋಡುತ್ತಿದ್ದಂತೆ ವ್ಯಾನ್ ಹೊತ್ತಿ ಉರಿದಿದೆ.

ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ. ಮಕ್ಕಳನ್ನು ಕೆಳಗಿಳಿಸುವ ವೇಳೆ ಸಣ್ಣಪುಟ್ಟ ಗಾಯಗಳಾಗಿವೆ. ಮಕ್ಕಳು ಶಂಕರನಗರ, ಅಣ್ಣಾಪುರ ಭಾಗದವರೆಂದು ತಿಳಿದುಬಂದಿದ್ದು, ಸರ್ಕಾರಿ ನಿಯಮಗಳನ್ನು ಮೀರಿ ಶಾಲಾ ಮಕ್ಕಳನ್ನು ಕರೆದೊಯ್ಯಲು ಖಾಸಗಿ ವಾಹನಗಳನ್ನು ಬಳಕೆ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇಂತಹ ಘಟನೆಗಳು ನಡೆದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಪಟೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin