ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಸರ್ಕಾರಕ್ಕೆ ಹೊರೆಯೆ..? ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆಯೇ..?

ಈ ಸುದ್ದಿಯನ್ನು ಶೇರ್ ಮಾಡಿ

Bus-Pass

– ರವೀಂದ್ರ ವೈ.ಎಸ್.
ಬೆಂಗಳೂರು ,ಜೂ.15- ದೇಶದ ಕೆಲವೇ ಕೆಲವು ರಾಜ್ಯಗಳಲ್ಲಿ ಅತಿಹೆಚ್ಚು ಬಜೆಟ್ ಮಂಡಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆಯೇ..?!  ಸಾರ್ವಜನಿಕ ವಲಯದಲ್ಲಿ ಇಂತಹ ಪ್ರಶ್ನೆ ಉದ್ಭವಿಸಲು ಪ್ರಮುಖ ಕಾರಣವೆಂದರೆ ಸರ್ಕಾರ ತೆಗೆದುಕೊಂಡಿರುವ ಕೆಟ್ಟ ನಿರ್ಧಾರ. ಸುಮಾರು ಎರಡು ಲಕ್ಷಕ್ಕೂ ಅಧಿಕ ಕೋಟಿ ವಾರ್ಷಿಕ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರ ಕೇವಲ 630 ಕೋಟಿ ಹೊರೆಯಾಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಉಚಿತ ಬಸ್ ಪಾಸ್ ನಿಲ್ಲಿಸಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ವಾರಗಳು ಮುಗಿಯುತ್ತಾ ಬಂದಿದ್ದರೂ ವಿದ್ಯಾರ್ಥಿಗಳಿಗೆ ಈಗಲೂ ಬಸ್‍ಪಾಸ್ ಸಿಕ್ಕಿಲ್ಲ.

ಪರಿಣಾಮ ನಗರ ಮತ್ತು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ. ಸದ್ಯಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಬಸ್ ಪಾಸ್ ನೀಡಲಾಗುತ್ತಿದೆ. ತಮಗೂ ಕೂಡ ಉಚಿತವಾಗಿಯೇ ಬಸ್ ಪಾಸ್ ನೀಡಬೇಕೆಂದು ಇತರೆ ಸಮುದಾಯದ ವಿದ್ಯಾರ್ಥಿಗಳು ಈಗಾಗಲೇ ರಾಜ್ಯದ ನಾನಾ ಕಡೆ ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರ ಮಾತ್ರ ಆರ್ಥಿಕ ಹೊರೆ ಎಂಬ ನೆಪ ಹೇಳಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿದೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡುವುದಾಗಿ ಕಳೆದ ಸಾಲಿನ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ಕಂಡುಬಂದ ಕಾರಣ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುವುದಾಗಿ ಸರ್ಕಾರ ಹೇಳಿತ್ತು.

ಈಗ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪ್ರಸಕ್ತ ಸಾಲಿನಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ನೀಡಿದರೆ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂಬ ಕಾರಣ ಹೇಳಿ ರಿಯಾಯ್ತಿ ದರದಲ್ಲಿ ಮಾತ್ರ ಪಾಸ್ ನೀಡುವ ಆಶ್ವಾಸನೆ ನೀಡಿದೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಮಾತ್ರ ಸದ್ಯಕ್ಕೆ ಉಚಿತ ಬಸ್‍ಪಾಸ್ ಪಡೆಯಬಹುದಾಗಿದ್ದು ಇತರೆ ಸಮುದಾಯದ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಪಾಸ್ ಪಡೆಯಬೇಕು. ಒಂದರಿಂದ 10ನೇ ತರಗತಿಯ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆದರೆ ಉಳಿದವರು ಶೇ.25ರಷ್ಟು ಪಾವತಿ ಮಾಡಬೇಕೆಂಬ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲೂ ವಿರೋಧ ಕೇಳಿಬರುತ್ತಿದೆ. ಕಳೆದ ಜೂ.7ರಿಂದ ಬಸ್ ಪಾಸ್ ವಿತರಣೆ ಆರಂಭವಾಗಿದೆಯಾದರೂ ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಎಲ್ಲಿಯೂ ಸಿಗುತ್ತಿಲ್ಲ.

ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಯೋಜನೆ ಅನುಷ್ಠಾನ ಮಾಡಿದರೆ ಸರ್ಕಾರದ ಮೇಲೆ 629 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಈ ಕುರಿತು ಆರ್ಥಿಕ ಇಲಾಖೆ ಒಪ್ಪಿಗೆಗಾಗಿ ಸಾರಿಗೆ ಇಲಾಖೆ ಕಡತ ರವಾನಿಸಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮಗಳು ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಿಸುತ್ತಿವೆ.

ಒಟ್ಟಾರೆ ಪಾಸ್ ವೆಚ್ಚದಲ್ಲಿ ಶೇ.50 ಸರ್ಕಾರದಿಂದ ಸಹಾಯಧನ, ಶೇ.25 ಮೊತ್ತ ವಿದ್ಯಾರ್ಥಿಗಳಿಂದ ಮತ್ತು ಉಳಿದ ಶೇ.25 ಮೊತ್ತವನ್ನು ನಿಗಮವೇ ಭರಿಸುತ್ತಿದೆ. 2017ರಲ್ಲಿ ಎಸ್‍ಸಿಪಿ, ಡಿಎಸ್‍ಪಿ ಕ್ರಿಯಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗಿತ್ತು. ಬಜೆಟ್‍ನಲ್ಲಿ ಘೋಷಿಸಿರುವಂತೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿದಲ್ಲಿ, ವಿದ್ಯಾರ್ಥಿಗಳ ಸಂಖ್ಯೆ ಶೇ.20-25 ರಷ್ಟು ಏರಿಕೆಯಾಗಲಿದೆ.

ಪಾಸಿನ ದರ ಉಚಿತವಾಗಿದ್ದು, ಪಾಸ್ ಮುದ್ರಾಣಾ ವೆಚ್ಚ, ವಿತರಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯಲು ಕೆಎಸ್‍ಆರ್‍ಟಿಸಿ ನಿರ್ಧರಿಸಿದೆ.2017-18 ನೇ ಸಾಲಿನಲ್ಲಿ ನಿಗಮಗಳು 18.29 ಲಕ್ಷ ವಿದ್ಯಾರ್ಥಿಗಳಿಗಹೆ ಉಚಿತ ಹಾಗೂ ರಿಯಾಯಿತಿ ದರದ ಬಸ್ ಪಾಸ್ ವಿತರಿಸಿತ್ತು. 2018-19 ನೇ ಸಾಲಿನಲ್ಲಿ ಉಚಿತ ಪಾಸು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 22 ರಿಂದ 23 ಲಕ್ಷದವರೆಗೆ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಉಚಿತ ಬಸ್ ಪಾಸ್ ವಿತರಿಸಲು 1,955.06 ಕೋಟಿ ರೂ. ವೆಚ್ಚವಾಗಲಿದೆ. 2018-19 ನೇ ಸಾಲಿನ ಬಜೆಟ್‍ನಲ್ಲಿ ಪಾಸ್‍ಗೆ 836.98 ಕೋಟಿ ರೂ. ಸಹಾಯ ಧನ ನಿಗದಿಪಡಿಸಲಾಗಿದೆ.

ಬದ್ಧತೆ ಪ್ರದರ್ಶಿಸಲಿಲ್ಲ:
ಸರ್ಕಾರಕ್ಕೆ ನಿಜವಾಗಿಯೂ ಕಳಕಳಿ ಇದ್ದಲ್ಲಿ ಮೊದಲು ತನ್ನ ಕಾಲ ಬುಡದಲ್ಲಿ ನಡೆಯುವ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಆರ್ಥಿಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಾಗಿ ಹೇಳಿರುವುದು ಪ್ರಶಂಸನೀಯ. ಮುಖ್ಯಮಂತ್ರಿಗಳ ಈ ಮಾದರಿಯನ್ನು ಸಚಿವರು ಮತ್ತು ಶಾಸಕರು ಅನುಸರಿಸುವರೇ ಎಂಬುದೇ ಯಕ್ಷ ಪ್ರ£ಆರ್ಥಿಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಾಗಿ ಹೇಳಿರುವುದು ಪ್ರಶಂಸನೀಯ. ಮುಖ್ಯಮಂತ್ರಿಗಳ ಈ ಮಾದರಿಯನ್ನು ಸಚಿವರು ಮತ್ತು ಶಾಸಕರು ಅನುಸರಿಸುವರೇ ಎಂಬುದೇ ಯಕ್ಷ ಪ್ರಶ್ನೆ.

Facebook Comments

Sri Raghav

Admin