ಏಟಿಗೆ ಎದಿರೇಟು : ಅಮೆರಿಕ ಸರಕುಗಳ ಮೇಲೆ ಭಾರೀ ಸುಂಕ ವಿಧಿಸಿದ ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

America-Vs-China

ಬೀಜಿಂಗ್, ಜೂ.16-ಅಮೆರಿಕಕ್ಕೆ ಚೀನಾ ಏಟಿಗೆ ಎದಿರೇಟು ನೀಡಿದೆ. ಚೀನಿ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.25ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಬೀಜಿಂಗ್ ಪ್ರತೀಕಾರದ ಕ್ರಮವಾಗಿ ಅಮೆರಿಕ ವಸ್ತುಗಳ ಮೇಲೆ ಅಷ್ಟೇ ಮೊತ್ತದ ಅಂದರೆ 50 ಶತಕೋಟಿ ಡಾಲರ್ ತೆರಿಗೆ ವಿಧಿಸಿ ಬಿಸಿ ಮುಟ್ಟಿಸಿದೆ.

ಈ ಬೆಳವಣಿಗೆಯಿಂದಾಗಿ ಎರಡೂ ದೇಶಗಳ ನಡುವಣ ವಾಣಿಜ್ಯ ಸಮರ ಮತ್ತಷ್ಟು ತಾರಕ್ಕೇರಿದೆ.   ಚೀನಾ ಬೌದ್ಧಿಕ ಆಸ್ತಿಗಳನ್ನು ಕಳವು ಮಾಡುತ್ತಾ ಅಕ್ರಮ ವಾಣಿಜ್ಯ ವಹಿವಾಟುಗಳನ್ನು ನಡೆಸುತ್ತಿದ್ದ ಎಂದು ಆರೋಪಿಸಿದ್ದ ಟ್ರಂಪ್, ಚೀನಿ ಸರಕುಗಳ ಮೇಲೆ 50 ಶತಕೋಟಿ ಡಾಲರ್ ಸುಂಕ ವಿಧಿಸುವ ತೀರ್ಮಾನ ಕೈಗೊಂಡಿದ್ದರು. ಇದಕ್ಕೆ ಪ್ರತೀಕಾರವಾಗಿ ಚೀನಾ ಕೂಡ ಅದೇ ದಾರಿ ಅನುಸರಿಸಿದ್ದು, ಈಗ ವಿಶ್ವದ ಎರಡು ಬೃಹತ್ ಆರ್ಥಿಕತೆಯ ದೇಶಗಳ ನಡುವೆ ಪೂರ್ಣ ಪ್ರಮಾಣದ ಟ್ರೇಡ್ ವಾರ್‍ಗೆ ಕಾರಣವಾಗಿದೆ. ಮುಂದೆ ಇದು ಇನ್ನಾವ ಹಂತ ತಲುಪುತ್ತದೆಯೋ ಕಾದು ನೋಡಬೇಕು.

Facebook Comments

Sri Raghav

Admin