ಫುಟ್ಬಾಲ್ ಪ್ರಿಯರಿಗಾಗಿ ಪುಟ್ಟ ಕೊಠಡಿಗಳ ಕ್ಯಾಪ್ಸುಲ್ ಹೋಟೆಲ್

ಈ ಸುದ್ದಿಯನ್ನು ಶೇರ್ ಮಾಡಿ

ds

ವಿಶ್ವ ಕಪ್ ಫುಟ್ಬಾಲ್ ಪಂದ್ಯಗಳನ್ನು ನೋಡಲು ಕ್ರೀಡಾ ಪ್ರೇಮಿಗಳು ಸಾಗರೋಪಾದಿಯಲ್ಲಿ ರಷ್ಯಾದತ್ತ ಧಾವಿಸಿದ್ದಾರೆ. ಸಹಸ್ರಾರು ಮಂದಿಗೆ ವಸತಿ ಸೌಲಭ್ಯ ಒದಗಿಸುವುದು ದೊಡ್ಡ ಸಮಸ್ಯೆಯಾಗಿದೆ. ಯೆಕಟರಿನ್‍ಬರ್ಗ್ ನಗರದಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗಿದೆ. ಫುಟ್ಬಾಲ್ ಪ್ರೇಮಿಗಳು ವಾಸ್ತವ್ಯ ಹೂಡಲು ಪುಟ್ಟ ಕೊಠಡಿಗಳ ಕ್ಯಾಪ್ಸುಲ್ ಹೋಟೆಲ್‍ವೊಂದು ನಿರ್ಮಾಣಗೊಂಡಿದೆ.  ರಷ್ಯಾದ ವಿವಿಧ ನಗರ ಮತ್ತು ಪಟ್ಟಣಗಳು ಈಗ ವಿಶ್ವ ಕಪ್ ಫುಟ್ಬಾಲ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿದೆ. ಅವರಿಗೆಲ್ಲಾ ವಸತಿ ಸೌಲಭ್ಯ ಕಲ್ಪಿಸುವುದು ದೊಡ್ಡ ಸವಾಲಾಗಿದೆ. ಇದನ್ನು ಮನಗಂಡ ಯೆಕಟರಿನ್‍ಬರ್ಗ್ ನಗರದ ಉದ್ಯಮಿಯೊಬ್ಬರು ಅತ್ಯಂತ ಕಡಿಮೆ, ಮೊಬೈಲ್-ಸ್ನೇಹಿ ವಾಸ್ತವ್ಯ ಪರಿಹಾರೋಪಾಯ ಒದಗಿಸಿದ್ದಾರೆ. ಅದು ಕ್ಯಾಪ್ಸುಲ್ ಹೋಟೆಲ್.

ಏನಿದು ಕ್ಯಾಪ್ಸುಲ್ ಹೋಟೆಲ್..?
ಗಗನಯಾತ್ರಿ ಗಳಿಗಾಗಿ ಬಾಹ್ಯಾಕಾಶ ನೌಕೆಯಲ್ಲಿ ನಿರ್ಮಾಣಗೊಳ್ಳುವ ಪುಟ್ಟ ಕೊಠಡಿಯನ್ನು ಕ್ಯಾಪ್ಸುಲ್ ಎನ್ನುವರು. ಇದರಲ್ಲಿ ಒಬ್ಬರು ಮಲಗುವಷ್ಟು ಸ್ಥಳಾವಕಾಶ ಇರುತ್ತದೆ. ಇದರಲ್ಲಿ ಟೆಲಿವಿಷನ್, ಏರ್ ಕಂಡಿಷನರ್ ಹಾಗೂ ಸುರಕ್ಷಿತ ಸಾಧನ ಇರುತ್ತದೆ. ಗೋಡೆಯಲ್ಲಿ ಇಂಥ ಕ್ಯಾಪ್ಸುಲ್ ಹೋಟೆಲ್ ರೂಂಗಳನ್ನು ನಿರ್ಮಿಸಲಾಗಿದೆ. ಪುಟ್ಟ ಬಾಗಿಲು ತೆರೆದು ಒಳ ಹೋದರೆ ಸುಸಜ್ಜಿತ ಕೊಠಡಿ ಇರುತ್ತದೆ. ಈ ಕ್ಯಾಪ್ಸುಲ್ ಹೋಟೆಲ್ ಪರಿಕಲ್ಪನೆ ಬಗ್ಗೆ ಮಹಿಳಾ ಅತಿಥಿಯೊಬ್ಬರು ಮೆಚ್ಚುಗೆ ಸೂಚಿಸಿದರು.

ds-2 ds-1

“ಇಂಥ ಹೋಟೆಲ್‍ನನ್ನು ನಾವು ಹಿಂದೆಂದೂ ನೋಡಿಲ್ಲ. ಇದೊಂದು ವಿಭಿನ್ನ ಪರಿಕಲ್ಪನೆ. ಇದರಲ್ಲಿ ವಾಸ್ತವ್ಯ ಹೂಡಲು ಖುಷಿಯಾಗುತ್ತದೆ” ಎನ್ನುತ್ತಾರೆ ಓಲ್ಗಾ ಗ್ಯಾರೊಚ್‍ಚೆಂಕೋ. ಈ ಹೋಟೆಲ್‍ನಲ್ಲಿ ಒಟ್ಟು 12 ಕ್ಯಾಪ್ಸುಲ್ ರೂಮ್‍ಗಳಿವೆ. ಕೆಲವು ಕೊಠಡಿಗಳಲ್ಲಿ ಇಬ್ಬರು ವಾಸ್ತವ್ಯ ಹೂಡಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಟಿವಿ ಇಲ್ಲದ ಒಂದು ರೂಂನಲ್ಲಿ ಒಂದು ರಾತ್ರಿಗೆ 10 ಡಾಲರ್, ಟಿವಿ ಸೌಲಭ್ಯವಿರುವ ಕೊಠಡಿಗೆ 12 ಡಾಲರ್ ಹಾಗೂ ಡಬಲ್ ರೂಂಗೆ 19 ಡಾಲರ್. ಈ ನಗರದಲ್ಲಿರುವ ಇತರ ಹೊಟೆಲ್‍ಗಳಿಗೆ ಹೋಲಿಸಿದರೆ ಇದು ಅತ್ಯಂತ ಅಗ್ಗದ ದರ. ಫುಟ್ಬಾಲ್ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕ್ಯಾಪ್ಸುಲ್ ಹೋಟೆಲ್‍ಗಳನ್ನು ವಿಸ್ತರಿಸಲು ಮಾಲೀಕರು ಉದ್ದೇಶಿಸಿದ್ದಾರೆ.

Facebook Comments

Sri Raghav

Admin