ಶ್ರೀನಗರದಲ್ಲಿ ಮತ್ತೆ ಉಗ್ರರ ದಾಳಿ : ಪೊಲೀಸರೂ ಸೇರಿ ಕೆಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Srinagar-01

ಶ್ರೀನಗರ, ಜೂ.16-ಕಾಶ್ಮೀರ ರಾಜಧಾನಿ ಶ್ರೀನಗರದ ಲಾಲ್ ಚೌಕ್‍ನಲ್ಲಿ ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಮತ್ತು ಅವರ ಇಬ್ಬರು ಅಂಗರಕ್ಷಕರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ 24 ಗಂಟೆಗಳ ಒಳಗೆ ನಗರದಲ್ಲಿ ಮತ್ತೆ ಭಯೋತ್ಪಾದಕರು ಆಕ್ರಮಣ ನಡೆಸಿದ್ದಾರೆ.  ಮೋಟಾರ್ ಸೈಕಲ್‍ನಲ್ಲಿ ಬಂದ ಮೂವರು ಉಗ್ರರು ಲಾಲ್ ಚೌಕ್‍ನಿಂದ 5 ಕಿ.ಮೀ.ದೂರದಲ್ಲಿರುವ ಎಸ್‍ಎಂಎಚ್‍ಎಸ್ ಆಸ್ಪತ್ರೆ ಬಳಿ ಪೊಲೀಸ್ ಚೆಕ್‍ಪೊೀಸ್ಟ್ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಮತ್ತು ಕೆಲವು ನಾಗರಿಕರಿಗೆ ಗಾಯಗಳಾಗಿವೆ. ಗುಂಡೇಟಿನಿಂದ ಮುಖ್ಯ ಪೇದೆ ಹಬಿಬುಲ್ಲಾ ಮತ್ತು ಚಮ್ಮಾರನೊಬ್ಬನಿಗೆ ತೀವ್ರ ಗಾಯಗಳಾಗಿವೆ. ಈ ಮಧ್ಯೆ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳತ್ತ ಕಲ್ಲು ತೂರಾಟದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪಿನ ಮೇಲೆ ಗುಂಡು ಹಾರಿಸಿದ ಪರಿಣಾಮ ಯುವಕನೊಬ್ಬ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ.

Facebook Comments

Sri Raghav

Admin