ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮಗೆ 98ನೇ ಜನ್ಮ ದಿನ

ಈ ಸುದ್ದಿಯನ್ನು ಶೇರ್ ಮಾಡಿ

Narasamma--01

ತುಮಕೂರು, ಜೂ.17- ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ.ಸೂಲಗಿತ್ತಿ ನರಸಮ್ಮ ಅವರ 98ನೇ ಜನ್ಮ ದಿನದ ಅಂಗವಾಗಿ ನಗರದ ಸರಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದ ರೋಗಿಗಳಿಗೆ ಹಣ್ಣು ಮತ್ತು ಸಿಹಿ ಹಂಚಲಾಯಿತು. ತಮ್ಮ 98ನೇ ಇಳಿ ವಯಸ್ಸಿನಲ್ಲೂ ಜಿಲ್ಲಾಸ್ಪತ್ರೆಗೆ ಆಗಮಿಸಿದ ನರಸಮ್ಮ ವಾರ್ಡಿನಲ್ಲಿದ್ದ ಬಾಣಂತಿಯಿಂದ ಮಗು ಪಡೆದು, ಆಡಿಸಿ, ನಗಿಸುವ ಮೂಲಕ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂಬ ಸಲಹೆ ನೀಡಿದರು. ಈ ವೇಳೆ ಮಾತನಾಡಿದ ಲೇಖಕಿ ಹಾಗೂ ವರದಕ್ಷಿಣೆ ವಿರೋಧಿ ವೇದಿಕೆಯ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ, ನಮ್ಮ ಜಿಲ್ಲೆಯ ಹಿರಿಯರೊಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಇಡೀ ಜಿಲ್ಲೆಯ ಸಂತೋಷ ಪಡುವ ವಿಚಾರ ಎಂದರು.

ಡಾ.ವೀರಭದ್ರಯ್ಯ ಮಾತನಾಡಿ, ಸೂಲಗಿತ್ತಿ ವೃತ್ತಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ಇಡೀ ಭಾರತರದಲ್ಲಿಯೇ ಇದೇ ಮೊದಲು. ಅವರು ಇಂದಿಗೂ ತಮ್ಮ ವೃತ್ತಿಯ ಬಗ್ಗೆ ಅಪಾರ ಗೌರವ ಹೊಂದಿರುವುದು ಶುಶ್ರೂಕ, ಶುಶ್ರೂಕರಿಗೆ ಮಾದರಿಯಾಗಿದ್ದಾರೆ ಎಂದರು.ತೆಲಂಗಾಣದ ಲೇಖಕಿ ಚೂಪಕ ಸುಭದ್ರ ಮಾತನಾಡಿ, ಸೂಲಗಿತ್ತಿ ವೃತ್ತಿಯಲ್ಲಿ ಅದ್ವೀತಿಯ ಸಾಧನೆ ಮಾಡಿ, ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಡಾ.ಸೂಲಗಿತ್ತಿ ನರಸಮ್ಮ ಅವರ ಕುರಿತು ಪುಸ್ತಕವನ್ನು ಹೊರತರುತ್ತಿದ್ದು, ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದೆಂದರು.

ನರಸಮ್ಮ ಅವರ ಮೊಮ್ಮಗ ಪಾವಗಡ ಶ್ರೀರಾಮ್, ಧನಿಯಕುಮಾರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್, ತೆಲಗು ಲೇಖಕಿ ಚೂಪಕ ಸುಭದ್ರ, ಚಲನಚಿತ್ರ ನಿರ್ದೇಶಕಿ ವೇಮುಲು ಶ್ರೀದೇವಿ, ರೇವಣ್ಣ ಸಿದ್ದಯ್ಯ,ಸುಪ್ರೀಯಾ ಕುಮಾರ್,ಜಿಲ್ಲಾ ಪಿ.ಕೆ.ಎಸ್.ನೌಕರರ ಸಂಘದ ಅಧ್ಯಕ್ಷ ಈರಪ್ಪ, ಕೊಪ್ಪಲ್ ನಾಗರಾಜು, ವಿಠಲ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin