2019 ರಲ್ಲಿ ರಸ್ತೆಗಿಳಿಯಲಿದೆ ಕೆಟಿಎಂ 390 ಅಡ್ವೆಂಚರ್ ಬೈಕ್..!

ಈ ಸುದ್ದಿಯನ್ನು ಶೇರ್ ಮಾಡಿ

KTM-Bike

ಬೆಂಗಳೂರು, ಜೂ.16- ಬಹುನಿರೀಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ವಿಷಯವನ್ನು ಕೆಟಿಎಂ ದೃಢಪಡಿಸಿದ್ದು, ಹಾಲಿ ಇರುವ ಸ್ಟ್ರೀಟ್‍ಫೈಟರ್ ಡ್ಯೂಕ್ಸ್ ಮತ್ತು ಸೂಪರ್ ಸ್ಪೋರ್ಟ್ ಆರ್‍ಸಿ ಜೊತೆಯಲ್ಲಿ ಈ ಅಡ್ವೆಂಚರ್ ಬೈಕ್ ಸೇರ್ಪಡೆಯಾಗಲಿದೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‍ನ ಅಧ್ಯಕ್ಷ (ಪ್ರೋ ಬೈಕಿಂಗ್) ಅಮಿತ್ ನಂದಿ, ಕೆಟಿಎಂ ಅತ್ಯಂತ ಜನಪ್ರಿಯ ಬ್ರ್ಯಾಂಡ್‍ನ ಬೈಕ್ ಆಗಿದೆ. ಇದೀಗ ಮುಂದಿನ ವರ್ಷ ಬರುತ್ತಿರುವ 390 ಅಡ್ವೆಂಚರ್ ಪ್ರೀಮಿಯಂ ಡ್ಯುಯೆಲ್-ಸ್ಪೋಟ್ರ್ಸ್ ಶ್ರೇಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಲಿದೆ ಮತ್ತು ಭಾರತೀಯ ರಸ್ತೆಗಳಿಗೆ ಪೂರಕವಾದ ಬೈಕ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವದ ಆಫ್-ರೋಡ್ ನಂಬರ್ ಒನ್ ಮೋಟರ್‍ಸೈಕಲ್ ಬ್ರ್ಯಾಂಡ್ ಎನಿಸಿರುವ ಕೆಟಿಎಂ, ಅತ್ಯಂತ ಕ್ಲಿಷ್ಟಕರ ರ್ಯಾಲಿ ಎನಿಸಿರುವ ಡಾಕರ್ ರ್ಯಾಲಿಯಲ್ಲಿ 2001 ರಿಂದ ಚಾಂಪಿಯನ್ ಎನಿಸಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿರುವ ಬೈಕ್ ಬ್ರ್ಯಾಂಡ್ ಎನಿಸಿರುವ ಕೆಟಿಎಂ, ಸಿಎಜಿಆರ್ ಅಂಕಿಅಂಶಗಳ ಪ್ರಕಾರ ಕಳೆದ ಆರು ವರ್ಷಗಳಿಂದ ಶೇ.45 ರಷ್ಟು ಮಾರುಕಟ್ಟೆಯಲ್ಲಿ ಪ್ರಗತಿ ಸಾಧಿಸುತ್ತಾ ಬಂದಿದೆ. ದೇಶಾದ್ಯಂತ ಇರುವ 320 ನಗರಗಳ 450 ಶೋರೂಂಗಳಲ್ಲಿ ಕೆಟಿಎಂ ಬೈಕ್‍ಗಳು ಲಭ್ಯವಿವೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ 390 ಅಡ್ವೆಂಚರ್ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಲಿದ್ದು, ರೇಸಿಂಗ್ ಇತಿಹಾಸದಲ್ಲಿ ತನ್ನದೇ ಆದ ಮನ್ನಣೆ ಗಳಿಸಿದೆ. 1290 ಸೂಪರ್ ಅಡ್ವೆಂಚರ್ ಮೋಟರ್‍ಸೈಕಲ್ ಟೂರಿಂಗ್ ಕಮ್ಯುನಿಟಿಯಲ್ಲಿ ಬಹುದೂರದ ಗುರಿಯನ್ನು ತಲುಪುವ ಮೊದಲ ಬೈಕ್ ಎನಿಸಿದೆ ಎಂದರು.

Facebook Comments

Sri Raghav

Admin