ಕದಂಕಕ್ಕೆ ಲಾರಿ ಉರುಳಿ ಬಿದ್ದು 8 ಮಂದಿ ಕೂಲಿ ಕಾರ್ಮಿಕರ ದಾರುಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬಂಗಾರಪೇಟೆ, ಜೂ.17- ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಕದಂಕಕ್ಕೆ ಉರುಳಿ ಬಿದ್ದ ಪರಿಣಾಮ ಕುಪ್ಪಂನ 8 ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಗಡಿ ಭಾಗದ ಕುಪ್ಪಂ ಮಂಡಲಂ ನಾಯನೂರು ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. 8 ಮಂದಿ ಕೂಲಿ ಕಾರ್ಮಿಕರು ಸೇರಿದಂತೆ 23ಕ್ಕೂ ಹೆಚ್ಚು ಮಂದಿ ಕುಪ್ಪಂನ ತೋಟವೊಂದರಲ್ಲಿ ಮಾವಿನಕಾಯಿ ಕಿತ್ತು ಅದನ್ನು ಲಾರಿಗೆ ತುಂಬಿದ್ದರು.

Accident--01-Andhra

ಇಂದು ಮುಂಜಾನೆ ಇದನ್ನು ತಮಿಳುನಾಡಿಗೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕುಪ್ಪಂ ಮಂಡಲಂನ ನಾಯನೂರು ಅರಣ್ಯ ಪ್ರದೇಶದಲ್ಲಿ ಕದಂಕಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

WhatsApp Image 2018-06-17 at 9.43.51 AM

WhatsApp Image 2018-06-17 at 9.43.52 AM

WhatsApp Image 2018-06-17 at 9.43.53 AM

WhatsApp Image 2018-06-17 at 9.44.02 AM

 

Facebook Comments

Sri Raghav

Admin