ನೈಜಿರಿಯಾ ವಿರುದ್ಧ ಕ್ರೊವೆಷಿಯಾಗೆ 2-0 ಗೋಲುಗಳಿಂದ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Nigeria--01

ಸರಾಂಕ್ಸ್, ಜೂ.17-ರಷ್ಯಾದಲ್ಲಿ ನಡೆಯುತ್ತಿರುವ 21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ 2-0 ಗೋಲುಗಳಿಂದ ನೈಜೀರಿಯಾ ವಿರುದ್ಧ ಕ್ರೊವೆಷಿಯಾ ಜಯ ಸಾಧಿಸಿದೆ ಪ್ರತಿಷ್ಠಿತ ಫಿಫಾ ಫುಟ್ಬಾಲ್ ಮಹಾಸಮರದ ಡಿ ಗ್ರೂಪ್‍ನಲ್ಲಿ ನಡೆದ ಪಂದ್ಯದಲ್ಲಿ ಕ್ರೊವೆಷಿಯಾದ ಲ್ಯೂಕ್ ಮೊಡ್ರಿಕ್ ಬಾರಿಸಿದ ಒಂದು ಗೋಲು ಹಾಗೂ ಪೆನಾಲ್ಟಿ ಸ್ಪಾಟ್‍ನಿಂದ ಮತ್ತೊಂದು ಗೋಲು ನೆರವಿನಿಂದ ತಂಡ ವಿಜಯಿಯಾಯಿತು.
ಪಂದ್ಯದ 32ನೇ ನಿಮಿಷದಲ್ಲಿ ರಿಯಲ್ ಮ್ಯಾಡ್ರಿಲ್ ಮಿಡ್ ಫೀಲ್ಡರ್ ರವಾನಿಸಿದ ಚೆಂಡನ್ನು

ಕ್ರೊವೆಷಿಯಾದ ಇಬ್ಬರು ಆಟಗಾರರು ಗೋಲುಪೆಟ್ಟಿಗೆ ಬಳಿ ಯಶಸ್ವಿಯಾಗಿ ಒಯ್ದರು. ಆದರೆ ಅದರನ್ನು ತಡೆಯುವ ಭರದಲ್ಲಿ ನೈಜಿರಿಯಾದ ಮಿಡ್‍ಫೀಲ್ಡರ್ ಓಗೆನೆಕರೊ ಎಟೆಬೋ ಅವರು ತಪ್ಪಿನಿಂದಾಗಿ ಚೆಂಡು ಅವರ ಅದೇ ತಂಡದ ಗೋಲ್ ಬಾಕ್ಸ್‍ಗೆ ಸೇರಿ ಕ್ರೊವೆಷಿಯಾಗೆ ಮೊದಲ ಗೋಲು ಲಭಿಸಿತು. ತನ್ನದೇ ಆಟಗಾರನ ತಪ್ಪಿನಿಂದ ಕೈತಪ್ಪಿದ ಒಂದು ಗೋಲು ನೈಜಿರಿಯಾಗೆ ಭಾರೀ ನಿರಾಸೆ ಉಂಟು ಮಾಡಿತು.  71ನೇ ನಿಮಿಷದಲ್ಲಿ ಲ್ಯೂಕ್ ಮೊಡ್ರಿಕ್ ಪೆನಾಲ್ಟಿ ಅವಕಾಶವನ್ನು ಗೋಲ್ ಆಗಿ ಪರಿವರ್ತಿಸಿದರು. ನಿನ್ನೆ ನಡೆದ ನಾಲ್ಕು ಪಂದ್ಯಗಳಲ್ಲಿ ಇದು ಐದು ಪೆನಾಲ್ಡಿ ಕಿಕ್ ಆಗಿದೆ. ಈ ಗೆಲುವಿನೊಂದಿಗೆ ಕ್ರೊವೆಷಿಯಾ ಡಿ ಗುಂಪಿನಲ್ಲಿ ಮೂರು ಪಾಯಿಂಟ್‍ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

Facebook Comments

Sri Raghav

Admin