ದೆಹಲಿಯಲ್ಲಿ ಪ್ರಧಾನಿ ಭೇಟಿ ಸಾಧ್ಯವಾಗದೆ ಹಿಂದಿರುಗಿದ ಮಹದಾಯಿ ಹೋರಾಟಗಾರರು

ಈ ಸುದ್ದಿಯನ್ನು ಶೇರ್ ಮಾಡಿ

Mahadayi--01
ಹುಬ್ಬಳ್ಳಿ, ಜೂ.17-ಪ್ರಧಾನಮಂತ್ರಿ ಅವರ ಭೇಟಿಗೆ ನವದೆಹಲಿಗೆ ತೆರಳಿದ್ದ ಮಹದಾಯಿ ಹೋರಾಟಗಾರರು ಅವರ ಭೇಟಿ ಸಾಧ್ಯವಾಗದೆ ಹಿಂದಿರುಗಿದ್ದಾರೆ. ನರಗುಂದ, ನವಲಗುಂದ ಸೇರಿದಂತೆ ಒಂಬತ್ತು ತಾಲೂಕಿನ 23 ಮಂದಿ ರೈತರು ಪ್ರಧಾನಿಯವರ ಭೇಟಿಗೆಂದು ನವದೆಹಲಿಗೆ ತೆರಳಿದ್ದರು. ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಹುಬ್ಬಳ್ಳಿಗೆ ಮರಳಿದ್ದಾರೆ. ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ ಮಹದಾಯಿ ಹೋರಾಟಗಾರರನ್ನು ಸ್ಥಳೀಯ ರೈತರು ಆತ್ಮೀಯವಾಗಿ ಬರಮಾಡಿಕೊಂಡರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಘೋಷಣೆ ಮೊಳಗಿಸಿದರು.

ಇದೇ ವೇಳೆ ಮಾತನಾಡಿದ ರೈತ ಮುಖಂಡ ಶಂಕರ ಅಂಬಲಿ, ಪ್ರಧಾನಿಯವರ ಭೇಟಿ ಸಾಧ್ಯವಾಗಲಿಲ್ಲ. ಆದರೆ ಕೇಂದ್ರ ನೀರಾವರಿ ಸಚಿವರು ತಮ್ಮ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಜು.21 ರಂದು ನ್ಯಾಯಾಧೀಕರಣ ಅಂತಿಮ ತೀರ್ಪು ಪ್ರಕಟವಾಗಲಿದೆ. ಆ.1 ರಂದು ಮತ್ತೆ ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 9 ತಾಲೂಕಿನ ಲಭ್ಯ ನೀರು ಬಳಸಿಕೊಂಡು ಸಣ್ಣ ನೀರಾವರಿಯೋಜನೆ ರೂಪಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಅವರ ಭೇಟಿ ತೃಪ್ತಿ ತಂದಿದೆ ಎಂದು ಹೇಳಿದರು.

Facebook Comments

Sri Raghav

Admin